ನಾಳೆ ಪಂಜದಲ್ಲಿ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ

0


ಜೇಸಿಐ ಪಂಜ ಪಂಚಶ್ರೀ,
ಪಶು ಸಂಗೋಪನಾ ಇಲಾಖೆ ಸುಳ್ಯ
ಇವರ ಜಂಟಿ ಆಶ್ರಯದಲ್ಲಿ
23 ನೇ ವರ್ಷದ ಹುಚ್ಚುನಾಯಿ ರೋಗ
ನಿರೋಧಕ ಲಸಿಕಾ ಕಾರ್ಯಕ್ರಮ ಜ.12 ರಂದು ಬೆಳಿಗ್ಗೆ 9.00 ಕ್ಕೆ ಪಂಜ ಗ್ರಾಮ ಪಂಚಾಯತು ಸಭಾಂಗಣದಲ್ಲಿ ಉದ್ಘಾಟನೆ ಗೊಳ್ಳಲಿದೆ.
ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ವಾಚಣ್ಣ ಕೆರೆಮೂಲೆ ಸಭಾಧ್ಯಕ್ಷತೆ ವಹಿಸಲಿದ್ದಾರೆ.ಜೇಸಿಐ ವಲಯ ಕಾರ್ಯದರ್ಶಿ ರವಿಚಂದ್ರ ಪಾಟಾಳಿ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಜಳಕದಹೊಳೆ, ಜೇಸಿಐ ಪೂರ್ವ ವಲಯ ಉಪಾಧ್ಯಕ್ಷ ಅಜಿತ್ ಶೆಟ್ಟಿ
ಉಪಸ್ಥಿತರಿರುವರು.ಲಸಿಕೆಯು ಪಡ್ಪಿನಂಗಡಿ, ಪಲ್ಲೋಡಿ, ಕೇನ್ಯ, ಕೃಷ್ಣನಗರ, ಪಂಜ ದೇಗುಲದ ಬಳಿ, ಕಂರ್ಬು ನೆಕ್ಕಿಲ ಬಸ್ ನಿಲ್ದಾಣ ಬಳಿ, ಹೇಮಳ ಶಾಲೆ ಬಳಿ, ಶಾಂತಿನಗರ, ಹಾಲೆಮಜಲು ಬಸ್ ನಿಲ್ದಾಣದ ಬಳಿ.
9 ಮಾರ್ಗಗಳಲ್ಲಿ ನಿಗದಿ ಪಡಿಸಿದ 130 ಕೇಂದ್ರಗಳಲ್ಲಿ ನಡೆಯಲಿದೆ. ಮಾಹಿತಿಗಾಗಿ; 9480533397, 9482104243,9449664123 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ