ಹುಟ್ಟುಹಬ್ಬದ ಪ್ರಯುಕ್ತ ಸೋಣಂಗೇರಿ ಅಂಗನವಾಡಿ ಕೇಂದ್ರಕ್ಕೆ ಗ್ಯಾಸ್ ಸ್ಟವ್ & ಆಟಿಕೆ ಕೊಡುಗೆ

0

ಜಾಲ್ಸೂರು ಗ್ರಾಮದ ಸೋಣಂಗೇರಿ ಅಂಗನವಾಡಿ ಕೇಂದ್ರದಲ್ಲಿ ಜ.8 ರಂದು ಶಾರದ ಹೆಣ್ಣುಮಕ್ಕಳ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯನಿ ತಂಗಮ್ಮ ಹಾಗೂ ಮಹಾಬಲ ಗೌಡ ಇವರ ಮೊಮ್ಮಗ ಇಶಾಂಕ್‌ನ 4 ನೇ ವರ್ಷದ ಹುಟ್ಟಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭ ಶಾಲೆಗೆ ಕೊಡುಗೆಯಾಗಿ ಇಶಾಂಕ್‌ನ ಪೋಷಕರಾದ ಡಾ|ಪುನೀತ್ ಹಾಗೂ ಶಿಕ್ಷಕಿ ಶೃತಿ ಇವರು ಗ್ಯಾಸ್ ಸ್ಟವ್ ಹಾಗೂ ಆಟಿಕೆಯನ್ನು ಅಂಗನವಾಡಿ ಶಿಕ್ಷಕಿಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸೋಣಂಗೇರಿ ಶಾಲಾ ಮುಖ್ಯ ಶಿಕ್ಷಕಿ ಕುಸುಮಾವತಿ, ಸಹ ಶಿಕ್ಷಕಿ ಸವಿತಾ ಎನ್.ಪಿ. ಮಾತನಾಡಿದರು.

ಶಾಲಾ ಶಿಕ್ಷಕಿಯರಾದ ವೇದಾವತಿ, ಜಯಲಕ್ಷ್ಮಿ, ಎಸ್‌ಡಿಎಂಸಿ ಉಪಾಧ್ಯಕ್ಷರು, ಮಕ್ಕಳ ಪೋಷಕರು, ಬಾಲವಿಕಾಸ ಸಮಿತಿ ಸದಸ್ಯರು, ಮಕ್ಕಳು, ಅಂಗನವಾಡಿ ಸಹಾಯಕಿ ಹಾಜರಿದ್ದರು.