ಅಮರಪಡ್ನೂರು ಸ.ಉ. ಹಿ. ಪ್ರಾ ಶಾಲಾ ವಾರ್ಷಿಕೋತ್ಸವ ಜ.7ರಂದು ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ಅಮರ ಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಾನಕಿ ಕಂದಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭುವನೇಶ್ವರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದಸ್ಯರಾದ ರಾಧಾಕೃಷ್ಣ ಕೊರೆತ್ಯಡ್ಕ, ಜನಾರ್ಧನ ಪೈಲೂರು, ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕರಾದ ಎಸ್ ಯನ್ ಮನ್ಮಥ, ಪ್ರಭಾರ ಶಿಕ್ಷಣ ಸಂಯೋಜಕರಾದ ಧನಲಕ್ಷ್ಮಿ ಕುದ್ಪಾಜೆ, ಪ್ರಾ. ಕೃ. ಪ. ಸ. ಸಂಘ(ನಿ) ಕುಕ್ಕುಜಡ್ಕ ಇದರ ಅಧ್ಯಕ್ಷರಾದ ಕೇಶವ ಗೌಡ ಕರ್ಮಜೆ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಧರ ಗೌಡ ಕೆ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಅತಿಥಿಗಳಾದ ಗಣಪಯ್ಯ ಭಟ್ ನಿವೃತ್ತ ಶಿಕ್ಷಕರು ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಶಿವಕುಮಾರ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಎಸ್. ಡಿ. ಎಂ. ಸಿ. ಅಧ್ಯಕ್ಷರಾದ ಈಶ್ವರ ಗೌಡ ಕೆ ಸ್ವಾಗತಿಸಿ ಉಪಾಧ್ಯಕ್ಷೆ ಗೀತಾ ಎಂ ಕೆ ವಂದಿಸಿದರು, ಶಿಕ್ಷಕಿ ರಮ್ಯ ಎಂ ಸಿ. ಕಾರ್ಯಕ್ರಮ ನಿರೂಪಿಸಿದರು.