ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧನು ಪೂಜೆ

0

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಡಿ.16 ರಿಂದ ಧನುಪೂಜೆ ಪ್ರಾರಂಭಗೊಂಡಿದ್ದು ಪ್ರತೀ ದಿನ ಧನಪೂಜೆ ನಡೆಯುತ್ತಿದೆ. ಪ್ರತೀ ದಿನ ಭಕ್ತಾದಿಗಳು ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ.

ದೇವಸ್ಥಾನದ ಅರ್ಚಕ ರಾಮಚಂದ್ರ ಪಿ.ಜಿ.ವಶಿಷ್ಟ ಭಟ್ ರವರು ಪೂಜಾ ಕಾರ್ಯ ನೆರವೇರಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ,ನೂತನ ವ್ಯ.ಸ.ಸದಸ್ಯರು ,ಭಕ್ತಾದಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಜ.14 ರವರೆಗೆ ಧನುಪೂಜೆ ನಡೆಯಲಿದೆ.