ಜೆ.ಎಸ್ ಇಲೆಕ್ಟ್ರಾನಿಕ್ಸ್ ಕೂಪನ್ ಡ್ರಾ

0

ಪ್ರಥಮ ಬಹುಮಾನ 43 ಇಂಚಿನ ಟಿವಿ 519 ನಂಬರ್‌ಗೆ

ಸುಳ್ಯದ ಜೆ.ಎಸ್ ಇಲೆಕ್ಟ್ರಾನಿಕ್ಸ್ ನಲ್ಲಿ 23ನೇ ವರ್ಷದ ಪಾದಾರ್ಪಣೆ ಮತ್ತು ಹಬ್ಬಗಳ ಸಂಭ್ರಮದ ಪ್ರಯುಕ್ತ ಏರ್ಪಡಿಸಿದ ರೂ 3000 ಮಿಗಿಲಾದ ಖರೀದಿಗೆ ಕೂಪನ್ ವಿತರಿಸಲಾಗಿತ್ತು. ಇದರ ಡ್ರಾವು ಜ.11 ರಂದು ನಡೆಯಿತು. ಡ್ರಾ ಫಲಿತಾಂಶವನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈಯವರು ಚೀಟಿ ಎತ್ತುವ ಮೂಲಕ ಅದೃಷ್ಟ ಗ್ರಾಹಕರನ್ನು ಆಯ್ಕೆ ಮಾಡಿದರು.

ಈ ಸಂದರ್ಭದಲ್ಲಿ ವರ್ತಕರ ಸಂಘದ ಉಪಾಧ್ಯಕ್ಷರಾದ ಆದಂ ಹಾಜಿ ಕಮ್ಮಾಡಿ, ಹಾಜಿ ಅಬ್ದುಲ್‌ ಹಮೀದ್ ಜನತಾ, ಹಾಜಿ ಅಬ್ದುಲ್‌ ಮಜೀದ್ ಜನತಾ, ಜೆ ಎಸ್ ಇಲೆಕ್ಟ್ರಾನಿಕ್ಸ್ ಕಟ್ಟಡ ಮಾಲಕ ಹಾಜಿ ಮಹಮ್ಮದ್ ಕೆಎಂಎಸ್, ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ ಎಸ್, ರಿಯಾಜ್ ಕಟ್ಟೆಕ್ಕಾರ್, ಶಿವಪ್ರಸಾದ್ ಪೂಜಾರಿ, ಬಾನುಪ್ರಕಾಶ್, ಚಂದ್ರಹಾಸ್ ಬಜಾಜ್ ಫೈನಾನ್ಸ್, ಬಶೀರ್ ಸಪ್ನಾ, ಶಿವಕುಮಾರ್ ಕೊಯಿಂಗೊಡಿ ಮೊದಲಾದವರು ಉಪಸ್ಥಿತರಿದ್ದರು.
ಮಾಲಕ ಜಲೀಲ್ ಸ್ವಾಗತಿಸಿ, ಕೆ ಬಿ ಇಬ್ರಾಹಿಂ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶದಲ್ಲಿ 43 ಇಂಚಿನ ಟಿವಿ ಪ್ರಥಮ 519, 32 ಇಂಚಿನ ಟಿವಿ ದ್ವಿತೀಯ 1350, ಮಿಕ್ಸಿ ತೃತೀಯ 951 ನಂಬರಿನ ಗ್ರಾಹಕರು ವಿಜೇತರಾದರು.