ನಿಂತಿಕಲ್ಲು ಸಮೀಪ ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕ 50 ಸಾವಿರ ರೂಗಳನ್ನು ಸ್ಥಳೀಯ ನಿವಾಸಿ ಹುಸೈನ್ ಎಂಬುವವರು ವಾರಿಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ವರದಿಯಾಗಿದೆ.
ನಿಂತಿಕಲ್ಲು ಕಲ್ಲೇರಿ ಸೇತುವೆ ಸಮೀಪ ಹುಸೈನ್ ಎಂಬುವವರು ತಮ್ಮ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭ ರೂಪಾಯಿಗಳ ಕಟ್ಟು ರಸ್ತೆ ಬದಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ ಅವರು ಬೈಕ್ ನಿಲ್ಲಿಸಿ ಹತ್ತಿರ ಹೋಗಿ ನೋಡಿದಾಗ ಅದು ಹಣದ ಕಟ್ಟಾಗಿದ್ದು ಎಣಿಸಿದಾಗ ಅದರಲ್ಲಿ ೫೦ ಸಾವಿರ ಮೊತ್ತ ವಿದ್ದು ಕೂಡಲೇ ಅವರು ಸಿಕ್ಕ ಹಣದ ಬಗ್ಗೆ ಸ್ಥಳೀಯವಾಗಿ ಜನರಲ್ಲಿ ಮಾಹಿತಿ ನೀಡಿದ್ದಾರೆ. ಬಳಿಕ ಹಣ ಕಳೆದು ಕೊಂಡವರು ಗೋಪಾಲ ಪಡ್ಪಿನಂಗಡಿ ರವರು ಎಂದು ತಿಳಿದು ಬಂದಿದ್ದು ನಂತರ ಸಿಕ್ಕಿದ ಹಣವನ್ನು ಅವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಇವರ ಪ್ರಾಮಾಣಿಕತೆಗೆ ಸ್ಥಳೀಯ ನಿವಾಸಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.