ಪಂಜ: ವರ್ಷಾವಧಿ ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

0

ಜ.24 ರಿಂದ ಫೆ.9 ತನಕ ಜಾತ್ರೋತ್ಸವ .

ಪಂಜ ಸೀಮೆಯ ಶ್ರೀ ಪರಿವಾರ ಸದಾಶಿವ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಜ.24 ರಿಂದ ಫೆ.9 ತನಕ ನಡೆಯಲಿದೆ. ಜ.24ರಂದು ಗೊನೆ ಮುಹೂರ್ತ,ಫೆ.1 ರಂದು ಧ್ವಜಾರೋಹಣ , ಫೆ.5 ರಂದು ದರ್ಶನ ಬಲಿ, ಫೆ.6 ರಂದು ಬ್ರಹ್ಮರಥೋತ್ಸವ ನಡೆಯಲಿದೆ.

ಜ.12 ರಂದು ಮಧ್ಯಾಹ್ನ ದೇವಳದಲ್ಲಿ ಪ್ರಾರ್ಥನೆ ನಡೆದು ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಧರ್ಮಪಾಲ ಗೌಡ ಮರಕಡ ಕಾಚಿಲ, ಧರ್ಮಣ್ಣ ನಾಯ್ಕ ಗರಡಿ, ರಾಮಚಂದ್ರ ಭಟ್,ಶ್ರೀಮತಿ ಪವಿತ್ರ ಮಲ್ಲೆಟ್ಟಿ, ಶ್ರೀಮತಿ ಮಾಲಿನಿ ಕುದ್ವ ಗೌರವ ಸಲಹೆಗಾರರಾದ ಮಹೇಶ್ ಕುಮಾರ್ ಕರಿಕ್ಕಳ, ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಯಿಲಪ್ಪ ಗೌಡ ಎಣ್ಮೂರು , ಆನಂದ ಗೌಡ ಕಂಬಳ, ಪರಮೇಶ್ವರ ಬಿಳಿಮಲೆ, ಅರ್ಚಕರು, ಸಿಬ್ಬಂದಿಗಳು , ಕೇಶವ ಗೌಡ ಕುದ್ವ, ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.