ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಂದ ಕ್ಲೀನ್ ಸ್ವೀಪ್

0

⬆️ 12 ಸ್ಥಾನಗಳಲ್ಲೂ ಸಹಕಾರ ಭಾರತಿ ಅಭ್ಯರ್ಥಿಗಳಿಗೆ ಭರ್ಜರಿ ಜಯ

⬆️ ಕಾಂಗ್ರೆಸ್ ಬೆಂಬಲಿತ ನಾಗರಿಕ ಸಮಿತಿ, ಪಕ್ಷೇತರ ಅಭ್ಯರ್ಥಿಗಳಿಗೆ ಸೋಲು

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕರುಗಳ ಆಯ್ಕೆಗೆ ಮತದಾನ ಜ.16 ರಂದು ನಡೆಯಿತು .

ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 12 ಅಭ್ಯರ್ಥಿಗಳ ಜಯಗಳಿಸಿದ್ದು ಮತ್ತೆ ಆಡಳಿತ ಮಂಡಳಿಗೆ ಸಂಪೂರ್ಣ ಸ್ಥಾನ ಪಡೆದಿದ್ದಾರೆ.

ಕಾಂಗ್ರೆಸ್ ಬೆಂಬಲಿತ ನಾಗರಿಕ ಸಮಿತಿಯ 12 ಅಭ್ಯರ್ಥಿಗಳು, 2 ಪಕ್ಷೇತರ ಸ್ಪರ್ಧಿಸಿ ಸೋತಿದ್ದಾರೆ.

ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಸಾಮಾನ್ಯ ಸ್ಥಾನದಲ್ಲಿ ಅರುಣ್ ರೈ ಗೆಜ್ಜೆ,ಚಂದ್ರಶೇಖರ ಶಾಸ್ತ್ರಿ,ಚಿನ್ನಪ್ಪ ಗೌಡ ಚೊಟ್ಟೆಮಜಲು,ವಾಸುದೇವ ಕೆರೆಕ್ಕೊಡಿ , ಸದಾನಂದ ಕಾರ್ಜ, ಸುಬ್ರಹ್ಮಣ್ಯ ಕುಳ,
ಪರಿಶಿಷ್ಟ ಜಾತಿ ಮೀಸಲು ಸ್ಥಾನದಲ್ಲಿ ಮುದರ ,ಪರಿಶಿಷ್ಟ ಪಂಗಡ ಮೀಸಲು ಸ್ಥಾನದಲ್ಲಿ ವಾಚಣ್ಣ ಕೆರೆಮೂಲೆ, ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನದಲ್ಲಿ ಲಿಗೋಧರ ಆಚಾರ್ಯ ಎನ್ ,ಹಿಂದುಳಿದ ವರ್ಗ ಪ್ರವರ್ಗ ಬಿ ಮೀಸಲು ಸ್ಥಾನದಲ್ಲಿ ತಿಮ್ಮಪ್ಪ ಗೌಡ ಕೂತ್ಕುಂಜ ,ಮಹಿಳಾ ಮೀಸಲು ಸ್ಥಾನದಲ್ಲಿ ವನಿತಾ ಅತ್ಯಡ್ಕ, ಬೇಬಿ ಕಟ್ಟ ಜಯ ಗಳಿಸಿದ್ದಾರೆ.