ಸುಳ್ಯ ಡಿಸಿಸಿ ಬ್ಯಾಂಕ್ ನಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ಐವರ್ನಾಡು ಸಹಕಾರಿ ಸಂಘದ ಅಧ್ಯಕ್ಷರಾದ ಎಸ್.ಎನ್.ಮನ್ಮಥರಿಗೆ ಸನ್ಮಾನ

0

ದ.ಕ‌.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿ ಆಯ್ಕೆಯಾದ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್‌.ಮನ್ಮಥರವರಿಗೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ)ನ ಸುಳ್ಯ ತಾಲೂಕು ಶಾಖೆಗಳ ವತಿಯಿಂದ ಸುಳ್ಯ ಡಿಸಿಸಿ ಬ್ಯಾಂಕ್ ನಲ್ಲಿ ಜ.17ರಂದು ಸನ್ಮಾನಿಸಲಾಯಿತು.


ಎಸ್.ಎನ್‌‌.ಮನ್ಮಥರವರು ಶಶಿಕುಮಾರ್ ರೈ ಬಾಲ್ಯೊಟ್ಟು ರವರನ್ನು, ಶಶಿಕುಮಾರ್ ರೈಯವರು ಎಸ್.ಎನ್.ಮನ್ಮಥರನ್ನು ಸನ್ಮಾನಿಸಿದರು. ಡಿಸಿಸಿ ಬ್ಯಾಂಕ್ ನ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥನ್ ನಾಯರ್ ಅಭಿನಂದನಾ ಭಾಷಣ ಮಾಡಿದರು. ಸನ್ಮಾನ ಸ್ವೀಕರಿಸಿದ ಇಬ್ಬರೂ ಕೃತಜ್ಞತೆ ಸಲ್ಲಿಸಿದರು.ವೇದಿಕೆಯಲ್ಲಿ ನಿವೃತ್ತ ಡಿಜಿಎಂ ಇಸ್ಮಾಯಿಲ್, ನಿವೃತ್ತ ಶಾಖಾ ವ್ಯವಸ್ಥಾಪಕ ಹರಿಶ್ಚಂದ್ರ ಗೌಡ ಎಂ.ಉಪಸ್ಥಿತರಿದ್ದರು. ಈಶ್ವರಮಂಗಲ ಶಾಖಾ ವ್ಯವಸ್ಥಾಪಕ ದಾಮೋದರ ಕೇನಾಜೆ ಶುಭ ಹಾರೈಸಿದರು.


ಸುಳ್ಯ ಶಾಖಾ ವ್ಯವಸ್ಥಾಪಕ ಚಂದ್ರಪ್ರಕಾಶ್ ಕಂಬಳ ಸೇರಿದಂತೆ ವಿವಿಧ ಶಾಖೆಗಳ ವ್ಯವಸ್ಥಾಪಕರು, ಸಿಬ್ಬಂದಿಗಳು, ಹಿತೈಷಿಗಳು ಉಪಸ್ಥಿತರಿದ್ದರು. ಸುಳ್ಯದ ಸ್ವರ್ಣಶ್ರೀ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ವತಿಯಿಂದಲೂ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಆರತಿ ಪುರುಷೋತ್ತಮ ಪ್ರಾರ್ಥಿಸಿದರು.ಬೆಳ್ಳಾರೆ ಶಾಖಾ ವ್ಯವಸ್ಥಾಪಕ ಸಂತೋಷ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಸೂಲಾತಿ ಅಧಿಕಾರಿ ಆದರ್ಶ ಬೊಳ್ಳೂರು ವಂದಿಸಿದರು.