ಎ.ಒ.ಎಲ್.ಇ. ಕಮಿಟಿ ಬಿ ಚಯರ್‌ಮೇನ್ ಡಾ| ರೇಣುಕಾಪ್ರಸಾದ್ ಕೆ.ವಿ.ಯವರಿಂದ ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸ್ಮಾರ್ಟ್‌ಕ್ಲಾಸ್ ಉದ್ಘಾಟನೆ

0

ಅಕಾಡೆಮಿ ಆಪ್ ಲಿಬರಲ್ ಎಜುಕೇಶನ್ (ರಿ) ಕಮಿಟಿ ಬಿ ಇದರ ಅಧ್ಯಕ್ಷರು ಮತ್ತು ಪ್ರತಿಷ್ಠಿತ ರಾಜ್ಯ ಒಕ್ಕಲಿಗರ ಸಂಘ ಬೆಂಗಳೂರು ಇದರ ಉಪಾಧ್ಯಕ್ಷರಾದ ಡಾ| ರೇಣುಕಾ ಪ್ರಸಾದ್ ಕೆ.ವಿ ರವರು ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ತೆಯಲ್ಲಿ ಸ್ಮಾರ್ಟ್‌ಕ್ಲಾಸ್ ರೂಂನ್ನು ಜ. 18 ರಂದು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಕೆ.ವಿ.ಜಿ ಸಮೂಹ ವಿದ್ಯಾ ಸಂಸ್ಥೆಗಳು ಕಮಿಟಿ ಬಿ ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ವಿ.ಟಿ.ಯು ಬೆಳಗಾವಿ ಇದರ ಎಕ್ಸ್ಕೂಟಿವ್ ಕೌನ್ಸಿಲ್ ಸದಸ್ಯರು ಮತ್ತು ಬೆಂಗಳೂರು ರಾಜರಾಜೇಶ್ಚರಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಬೆಂಗಳೂರು ಇದರ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಡಾ| ಉಜ್ವಲ್ ಯು.ಜೆ ಉಪಸ್ಥಿತರಿದ್ದರು.


ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಿಬ್ಬಂದಿಗಳು ಕೊಡ ಮಾಡಿದ ಡಿಜಿಟಲ್ ಬೋರ್ಡ್ (ಸ್ಮಾರ್ಟ್‌ಬೋರ್ಡ್) ಮತ್ತು ನೂತನ ಜೆರಾಕ್ಸ್ ಮಿಷನ್‌ನನ್ನು ಉಧ್ಘಾಟಿಸಿ ತದನಂತರದಲ್ಲಿ ಸಭಾ ಕಾರ್ಯಕ್ರಮವನ್ನು ಡಾ| ರೇಣುಕಾ ಪ್ರಸಾದ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ೧೯೮೬ ರಲ್ಲಿ ಪೂಜ್ಯ ಡಾ| ಕುರುಂಜಿ ವೆಂಕಟ್ರಮಣ ಗೌಡರು ಸ್ಥಾಪಿಸಲ್ಪಟ್ಟ ಈ ವಿದ್ಯಾಸಂಸ್ಥೆ ಕಳೆದ ೩೯ ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಾ ಬಂದಿದೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡಿ ಅವರವರ ಬದುಕನ್ನು ಕಟ್ಟಿಕೊಳ್ಳುವಲ್ಲಿ ಸಫಲಾಗಿದ್ದಾರೆ. ಈ ಒಂದು ವಿದ್ಯಾಸಂಸ್ಥೆಯು ಪ್ರಾರಂಭದಲ್ಲಿ ಜಿನ್‌ಶೀಟ್ ಮಾಡಿನ ಕಟ್ಟಡದಲ್ಲಿದ್ದರೂ, ನಾನು ನೂತವಾಗಿ ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡಿ, ಆಧುನಿಕ ಶೈಲಿಯ ಲ್ಯಾಬ್‌ಗಳನ್ನು, ಉತ್ತಮ ಪೀಠೋಪಕರಣಗಳನ್ನು ಹೊಂದಿರುವ ಆಪೀಸು, ಕ್ಲಾಸ್‌ರೂಂಗಳನ್ನು ನೀಡಿ, ರಾಜ್ಯದಲ್ಲೆ ಒಂದು ಮಾದರಿ ಸಂಸ್ಥೆಯಾಗಿ ರೂಪಿಸುವಲ್ಲಿ ಎಲ್ಲ ರೀತಿಯ ಸಹಕಾರವನ್ನು ನೀಡಿರುತ್ತೇನೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಿದರು. ಮತ್ತು ಕೊಡುಗೆ ನೀಡಿದ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು. ಮುಖ್ಯ ಅತಿಥಿಗಳ ನೆಲೆಯಲ್ಲಿ ಮಾತನಾಡಿದ ಡಾ| ಉಜ್ವಲ್ ಯು.ಜೆ ರವರು ವಿದ್ಯಾರ್ಥಿಗಳಿಗೆ ಕಲಿಯುವಿಕೆಯಲ್ಲಿ ಹಿಂದೆ, ಭೌತಿಕ ಗುರುಗಳಿಂದ ಆರಂಭವಾದರೂ ಇವತ್ತು ಸ್ಮಾರ್ಟ್ ಗುರುಗಳ ಅನಿವಾರ್ಯತೆ ಇದೆ. ಇವುಗಳನ್ನು ನಾವು ಮೂರು ಹಂತಗಳಲ್ಲಿ ಗುರುತಿಸುವುದಾದರೆ ಫಿಸಿಕಲ್ ಗುರು, ಗೂಗಲ್ ಗುರು ಮತ್ತು ವೆಬ್ ಗುರು ಎಂಬುದಾಗಿ ವಿಂಗಡಿಸಬಹುದಾಗಿದೆ. ಆದುದರಿಂದ ಅಧ್ಯಾಪಕರು ಕೂಡ ಮೇಲ್ದರ್ಜೆಗೆ ಏರಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್‌ಗಳ ಮೂಲಕ ಶಿಕ್ಷಣವನ್ನು ನೀಡಬೇಕಾಗಿದೆ. ಇದಕ್ಕೆ ಪೂರಕವಾಗಿ ನಮ್ಮ ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿ ಈ ರೀತಿಯ Iಟಿಣeಡಿಚಿಛಿಣive ಆigiಣಚಿಟ ಃoಚಿಡಿಜ ಗಳನ್ನು ಅಳವಡಿಸುವಂತೆ ನಾನು ಸಲಹೆ ನೀಡಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನೀಡುತ್ತಿದೇವೆ. ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬುದಾಗಿ ಶುಭ ಹಾರೈಸಿದರು.


ಡಾ| ರೇಣುಕಾಪ್ರಸಾದ್ ಮತ್ತು ಡಾ| ಉಜ್ವಲ್‌ರವರಿಗೆ ಕೆ.ವಿ.ಜಿ ಐಟಿಐ ಸಿಬ್ಬಂದಿಗಳಿಂದ ಸನ್ಮಾನ


ಪ್ರತಿಷ್ಟಿತ ರಾಜ್ಯ ಒಕ್ಕಲಿಗರ ಸಂಘದಲ್ಲಿ ಎರಡನೇ ಬಾರಿಗೆ ಉಪಾಧ್ಯಕ್ಷರಾಗಿ ಪ್ರಥಮವಾಗಿ ಐಟಿಐ ವಿದ್ಯಾಸಂಸ್ಥೆಗೆ ಆಗಮಿಸಿದ ಡಾ| ರೇಣುಕಾಪ್ರಸಾದ್ ರವರಿಗೂ, ರಾಜರಾಜೇಶ್ವರಿ ಟೆಕ್ನಾಲಜಿ ಬೆಂಗಳೂರು ಇದರ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ, ವಿ.ಟಿ.ಯು ಬೆಳಗಾವಿಯಿಂದ ನೇಮಕಗೊಂಡು ಪ್ರಥಮವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಾ| ಉಜ್ವಲ್‌ರವರನ್ನು ಐಟಿಐ ಸಿಬ್ಬಂದಿಗಳು ಗೌರವದಿಂದ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಚಿದಾನಂದ ಗೌಡ ಬಾಳಿಲ, ಉಪ ಪ್ರಾಂಶುಪಾಲರಾದ ದಿನೇಶ ಮಡ್ತಿಲ, ಕೆ.ವಿ.ಜಿ ಐಟಿಐ ಭಾಗಮಂಡಲದ ಪ್ರಾಂಶುಪಾಲರಾದ ಶ್ರೀಕಾಂತ್, ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಪ್ರಸನ್ನ ರವರು ಉಪಸ್ಥತರಿದ್ದರು. ಸಭೆಯಲ್ಲಿ ಎ.ಜೆ ಪಿಯುಸಿ ಪ್ರ್ರಾಂಶುಪಾಲೆ ಡಾ| ಯಶೋದ ರಾಮಚಂದ್ರ, ಉಪಪ್ರಾಂಶುಪಾಲ ದೀಪಕ್, ಕೆವಿಜಿ ಇಂಜಿನಿಯರ್ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್, ಎ.ಒ. ನಾಗೇಶ್ ಕೊಚ್ಚಿ, ಕೆವಿಜಿ ಡೆಂಟಲ್ ಕಾಲೇಜಿನ ಉಪಪ್ರಾಂಶುಪಾಲೆ ಡಾ| ಶೈಲ, ಆಡಳಿತಾಧಿಕಾರಿ ಮಾಧವ ಬಿ.ಟಿ, ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಂಶುಪಾಲರಾದ ಅಣ್ಣಯ್ಯ, ಉಪಪ್ರಂಶುಪಾಲರಾದ ಹರೀಶ, ಮತ್ತು ವಸಂತ ಕಿರಿಭಾಗ, ಆನಂದ, ಸೀತಾರಾಮ, ಶಿವರಾಮ ಕೇರ್ಪಳ, ದನಂಜಯ ಕಲ್ಲುಗದ್ದೆ, ಸಂತೋಷ್, ಕಮಲಾಕ್ಷ ಮೊದಲಾದವರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಮೊದಲಿಗೆ ವಿದ್ಯಾರ್ಥಿನಿಯರಾದ ನಿಶಾ ಬಿಎಲ್ ಮತ್ತು ರಕ್ಷಿತಾ ಹೆಚ್.ಎಂ ಪ್ರಾರ್ಥನೆಗೈದು ಪ್ರಸ್ತಾವನೆ ಹಾಗೂ ಸ್ವಾಗತವನ್ನು ಸಂಸ್ಥೆಯ ಪ್ರಾಚಾರ್ಯರಾದ ಚಿದಾನಂದ ಗೌಡ ಬಾಳಿಲ ನೆರವೇರಿಸಿದರು. ಸಂಸ್ಥೆಯ ಉಪಪ್ರಾಂಶುಪಾಲರಾದ ದಿನೇಶ ಮಡ್ತಿಲರವರು ವಂದಿಸಿದರು. ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರ್ವಹಿಸಿದರು.