ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಳಲಂಬೆಯಲ್ಲಿ ಜ.7ರಂದು ವರ್ಗಾವಣೆಗೊಂಡ ಶಾಲಾ ಶಿಕ್ಷಕರಿಗೆ ಬೀಳ್ಕೊಡುಗೆ ಹಾಗೂ ಅಕ್ಷರ ದಾಸೋಹ ಸಿಬ್ಬಂದಿಗೆ ಸೇವಾ ನಿವೃತ್ತಿಯ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.
ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ ಕಾರ್ಯಕ್ರಮವನ್ನು ಉದ್ಘಾಟಿಸಿ,
ವರ್ಗಾವಣೆಗೊಂಡ ಶಿಕ್ಷಕಿಯರಾದ ಶ್ರೀಮತಿ ಪ್ರಮೀಳಾ ಪಿಎಸ್ ಹಾಗೂ ಶ್ರೀಮತಿ ಗೀತಾ ಲಕ್ಷ್ಮಿ ಎ ಯವರಿಗೆ ಗೌರವಾರ್ಪಣೆ ಮತ್ತು ಅಕ್ಷರ ದಾಸೋಹ ಸಿಬ್ಬಂದಿಯಾದ ಶ್ರೀಮತಿ ಲಕ್ಷ್ಮಿ ಅವರನ್ನು ಸನ್ಮಾನಿಸಿದರು.
ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ರವೀಶ್ ಕುಮಾರ್ ಎಂ ಮೊಟ್ಟೆಮನೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗುತ್ತಿಗಾರು ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ತುಂಬತ್ತಾಜೆ , ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕುಶಾಲಪ್ಪ ಮೊಟ್ಟೆಮನೆ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಚಂದ್ರಮತಿ ಹೆಟ್ ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಗೋಪಾಲಕೃಷ್ಣ ಪುರ್ಲುಮುಕ್ಕಿ , ವಳಲಂಬೆ ಮಹಿಳಾ ಮಂಡಲದ ಅಧ್ಯಕ್ಷರಾದ ಸರೋಜಿನಿ ಮುಳುಗಾಡು, ಮುಖ್ಯ ಗುರುಗಳು ತೃಪ್ತಿಕೆ ಪಿ, ಶಿಕ್ಷಕರಾದ ತೇಜಾವತಿ ಯಂ,ನಳಿನಾಕ್ಷಿ ಪಿ ಎಸ್, ಸವಿತಾ ಎಚ್,ಪರಶಿವಮೂರ್ತಿ ಕೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶ್ರೀಮತಿ ಅಪೂರ್ವ ಕೆ ನಿರೂಪಿಸಿ, ವಂದಿಸಿದರು.