Home Uncategorized ಫೆ.1 ರಂದು ಸಂಪಾಜೆ ಕೈಪಡ್ಕ ಶ್ರೀ ಸ್ವಾಮಿ ಕೊರಗಜ್ಜ ನೇಮೋತ್ಸವ ಹಾಗೂ ಹರಕೆ ಕೋಲ

ಫೆ.1 ರಂದು ಸಂಪಾಜೆ ಕೈಪಡ್ಕ ಶ್ರೀ ಸ್ವಾಮಿ ಕೊರಗಜ್ಜ ನೇಮೋತ್ಸವ ಹಾಗೂ ಹರಕೆ ಕೋಲ

0

ದ.ಕ ಸಂಪಾಜೆ ಗ್ರಾಮದ ಕೈಪಡ್ಕ ಸದ್ರಿ ಕ್ಷೇತ್ರದಲ್ಲಿ ಗುಳಿಗ ದೈವ ಮತ್ತು ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಹಾಗೂ ಹರಕೆ ಕೋಲವು ಫೆ. 01 ರಂದು ನಡೆಯಲಿದೆ.

ಫೆಬ್ರವರಿ 1 ರಂದು ಬೆಳಿಗ್ಗೆ 6 ಗಂಟೆಗೆ ಗಣ ಹೋಮ ಮತ್ತು ಸ್ಥಳ ಶುದ್ಧೀಕರಣ , 7 ಗಂಟೆಗೆ ದೀಪಾರಾಧನೆ, ಸಂಜೆ 6 ಗಂಟೆಗೆ ಎಣ್ಣೆ ಕೊಡುವುದು, ರಾತ್ರಿ 7 ಗಂಟೆಗೆ ಗುಳಿಗ ದೈವದ ಕೋಲ, ರಾತ್ರಿ 8: 30 ಕ್ಕೆ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ, ರಾತ್ರಿ 8: 45 ರಿಂದ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಮತ್ತು ಸ್ವಾಮಿ ಕೊರಗಜ್ಜ ದೈವದ ಹರಕೆಯ ಕೋಲ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಾಮಿ ಕೊರಗಜ್ಜನ ಸಿರಿಮುಡಿ ಕರಿಗಂಧ ಪ್ರಸಾದವನ್ನು ಪಡೆದು ಕೃಪೆಗೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ತಿಳಿಸಿದ್ದಾರೆ.

NO COMMENTS

error: Content is protected !!
Breaking