ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಎನ್.ಎಂ.ಸಿ. ವಿದ್ಯಾರ್ಥಿ ಹರ್ಷಿತ್ ಕೆ.ಎಲ್. ಭಾಗಿ

0

ಕರ್ನಾಟಕದ ವಿವಿಧ ವಿಶ್ವವಿದ್ಯಾನಿಲಯಗಳಿಂದ 12 ಮಂದಿ ಎನ್‌ಎಸ್‌ಎಸ್ ಸ್ವಯಂಸೇವಕರು ದೆಹಲಿಯ 2025ನೇ ಗಣರಾಜ್ಯೋತ್ಸವ ಪರೇಡಿಗೆ ವಿಶೇಷ ಅತಿಥಿಗಳಾಗಿ ಆಯ್ಕೆಯಾಗಿದ್ದು, ಮಂಗಳೂರು ವಿಶ್ವವಿದ್ಯಾನಿಲಯದಿಂದ ಸುಳ್ಯ ಎನ್.ಎಂ.ಸಿ.ಯ ದ್ವಿತೀಯ ಬಿಕಾಂ ವಿದ್ಯಾರ್ಥಿ ಎನ್‌ಎಸ್‌ಎಸ್ ನಾಯಕ ಹರ್ಷಿತ್ ಕೆ.ಎಲ್. ಆಯ್ಕೆಯಾಗಿದ್ದಾರೆ. ಇವರೊಂದಿಗೆ ಇವರ ಪೋಷಕರಿಗೂ ಅವಕಾಶ ಲಭಿಸಿದೆ.