ರೋಗಿಗಳಿಗೆ ಹಣ್ಣು, ಔಷಧೀಯ ಗಿಡಗಳ ವಿತರಣೆ
ಅಯ್ಯನಕಟ್ಟೆಯ ಗೋಕುಲ ಸಂಕೀರ್ಣದಲ್ಲಿರುವ ನಮ್ಮ ಆರೋಗ್ಯಧಾಮ ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಸೆಂಟರ್ 2ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಕ್ಲಿನಿಕ್ ಗೆ ಬಂದ ರೋಗಿಗಳಿಗೆ ಔಷಧೀಯ ಮತ್ತು ಹಣ್ಣಿನ ಗಿಡಗಳನ್ನು ಜ. 19ರಂದು ವಿತರಿಸಲಾಯಿತು. ಗೋಕುಲ ಸಂಕೀರ್ಣದ ಮಾಲಕರಾದ ಡಾ. ಕಿಶನ್ ರಾವ್ ರವರ ತಂದೆ ರಾಮಚಂದ್ರ ರಾವ್ ಬಾಳಿಲ ಗಿಡಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಜನರಲ್ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜನ್ ಡಾ. ಕಿಶನ್ ರಾವ್ ಬಾಳಿಲ ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಗೂ ಉಪಸ್ಥಿತರಿದ್ದರು.
ವಿಶೇಷತೆ: ಮಂಗಳೂರು, ಬೆಂಗಳೂರುಗಳಲ್ಲಿ ಲಭ್ಯವಿರುವಂತ ವಿಶೇಷ ಪರೀಕ್ಷೆಗಳು, ಮತ್ತು ಚಿಕಿತ್ಸೆ ಇಲ್ಲಿ ದೊರೆಯುತ್ತಿದ್ದು, ವಾರದ ವಿವಿಧ ದಿನಗಳಲ್ಲಿ ವಿಶೇಷ ತಜ್ಞ ವೈದ್ಯರು ಭೇಟಿ ನೀಡಿ ತಪಾಸಣೆ ನಡೆಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಭೇಟಿ ನೀಡುವ ತಜ್ಞ ವೈದ್ಯರು:ವಾರದ ಪ್ರತಿ ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ ಸಂಜೆ 5ರಿಂದ 6ರ ತನಕ ಮಕ್ಕಳ ತಜ್ಞೆ ಡಾ. ಮಧುಶ್ರೀ ಕೆ ಲಭ್ಯರಿರುತ್ತಾರೆ. ಪ್ರತೀ ಭಾನುವಾರ ಸಂಜೆ 3ರಿಂದ 5ರ ತನಕ ಫಿಸಿಶಿಯನ್ ಹಾಗೂ ಮಧುಮೇಹ ತಜ್ಞ ಡಾ. ನರಸಿಂಹ ಶಾಸ್ತ್ರಿ ಜಿ, ಭಾನುವಾರ ಬೆಳಿಗ್ಗೆ 9ರಿಂದ ಸಂಜೆ 6ರ ತನಕ ಜನರಲ್ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜನ್ ಡಾ. ಕಿಶನ್ ರಾವ್ ಬಾಳಿಲ, ಭಾನುವಾರ 10ರಿಂದ 12ರ ತನಕ ಕೀಲು ಮತ್ತು ಮೂಳೆ ತಜ್ಞ ಡಾ. ಶ್ರೇಯಸ್ದೊ ಡ್ಡಿಹಿತ್ಲು, ಬುಧವಾರ ಸಂಜೆ 2ರಿಂದ 5ರ ತನಕ ಆಪ್ತ ಸಮಾಲೋಚನಾ ತಜ್ಞೆ ಶ್ರದ್ಧಾ ಎಲ್. ರೈ, ಪ್ರತೀ ತಿಂಗಳ 3ನೇ
ಶನಿವಾರ ಬೆಳಿಗ್ಗೆ 10ರಿಂದ 12 ಮೈಸೂರಿನ ನೋವು ನಿವಾರಣಾ ತಜ್ಞೆ ಡಾ. ರಾಧಿಕಾ ಡಿ, ಪ್ರತಿ ಶುಕ್ರವಾರ ಬೆಳಿಗ್ಗೆ 11 to 1ರ ತನಕ ಫಿಸಿಯೋಥೆರಪಿಸ್ಟ್ ಡಾ. ಹರೀಶ್ ಕೃಷ್ಣ ಮತ್ತು ಚರ್ಮರೋಗ ತಜ್ಞ ಡಾ. ಕೆ.ಜಿ. ಕೃಷ್ಣದೀಪ್ ಪ್ರತೀ ಆದಿತ್ಯವಾರ ಅಪರಾಹ್ನ 2.30ರಿಂದ 3.30ರ ತನಕ ತಪಾಸಣೆ ಮತ್ತು ಚಿಕಿತ್ಸೆಗೆ ಲಭ್ಯರಿದ್ದಾರೆ.
ಸೌಲಭ್ಯಗಳು: ಅತ್ಯಾಧುನಿಕ ಡಿಜಿಟಲ್ ಎಕ್ಸ್ ರೇ, ಸುಸಜ್ಜಿತ ಫಿಸಿಯೋಥೆರಪಿ ಕ್ಲಿನಿಕ್, ರಕ್ತ ಪರೀಕ್ಷೆ ಮತ್ತು ಇಸಿಜಿ ಸೌಲಭ್ಯಗಳು ವಾರದ ಎಲ್ಲಾ ದಿನಗಳಲ್ಲಿ ಲಭ್ಯವಿರುತ್ತದೆ. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಸೇವೆ ಲಭ್ಯವಿರುವುದಾಗಿ ಡಾ. ಕಿಶನ್ ರಾವ್ ಬಾಳಿಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.