ಫೆ. 9: ಸುಳ್ಯ ತಾಲೂಕು ಮಾರಾಟಿ ಸಮಾಜ ಸೇವಾ ಸಂಘದ ಕ್ರೀಡಾಕೂಟ- ಆಮಂತ್ರಣ ಪತ್ರ ಬಿಡುಗಡೆ

0

ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಮರಾಟಿ ಮಹಿಳಾ ವೇದಿಕೆ ಮತ್ತು ಯುವ ವೇದಿಕೆಯ ಸಹಯೋಗದಲ್ಲಿ ಮರಾಟಿ ಬಾಂಧವರಿಗಾಗಿ ಕ್ರೀಡಾ ಸ್ಪರ್ಧೆಗಳು ಫೆ. 9ರಂದು ಸುಳ್ಯದ ಅಂಬಟೆಡ್ಕದಲ್ಲಿರುವ ಗಿರಿದರ್ಶಿನಿಯಲ್ಲಿ ನಡೆಯಲಿದ್ದು, ಆಮಂತ್ರಣ ಪತ್ರ ಬಿಡುಗಡೆ ಜ. 19ರಂದು ನಡೆಯಿತು.

ಸಂಘದ ಮಾಜಿ ಅಧ್ಯಕ್ಷ ಡಾ. ಎಸ್. ರಂಗಯ್ಯ ಆಮಂತ್ರಣ ಪತ್ರ ಬಿಡುಗಡೆ ಮಾಡಿದರು. ಸಂಘ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಅಜ್ಜಾವರ, ನಿಕಟಪೂರ್ವಾಧ್ಯಕ್ಷ ಜನಾರ್ಧನ್ ಬಿ. ಕುರುಂಜಿಭಾಗ್, ಉಪಾಧ್ಯಕ್ಷೆ ಶ್ರೀಮತಿ ಸುಲೋಚನಾ ನಾರಾಯಣ, ಪ್ರಧಾನ ಕಾರ್ಯದರ್ಶಿ ರಮೇಶ್ ನೀರಬಿದಿರೆ,ಕಾರ್ಯಕಾರಿ ಸಮಿತಿ ಸದಸ್ಯರಾದ ಜಗದೀಶ್ ಅರಂಬೂರು, ಈಶ್ವರ ವಾರಣಾಶಿ, ಶ್ರೀಮತಿ ಶೋಭ ಎ.ಕೆ. ನಾಯ್ಕ್, ಭವಾನಿಶಂಕರ ಕಲ್ಮಡ್ಕ, ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ರೇವತಿ ದೊಡ್ಡೇರಿ, ಸದಸ್ಯರಾದ ಶ್ರೀಮತಿ ನಳಿನಾಕ್ಷಿ, ಶ್ರೀಮತಿ ಮೀನಾಕ್ಷಿ ಭಸ್ಮಡ್ಕ, ಶ್ರೀಮತಿ ಶೋಭ ಬೆಳ್ಳಾರೆ, ಯುವ ವೇದಿಕೆಯ ದಿನೇಶ್ ಭಸ್ಮಡ್ಕ, ಸಭಾಭವನದ ಮೇಲ್ವಿಚಾರಕ ಪುನೀತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಮೇಶ್ ನೀರಬಿದಿರೆ ಸ್ವಾಗತಿಸಿ, ವಂದಿಸಿದರು.

ಫೆ. 9ರಂದು ನಡೆಯಲಿರುವ ಕ್ರೀಡಾಸ್ಪರ್ಧೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ.ಯಿಂದ ಆರಂಭಗೊಂಡು 61ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ತನಕ ವಿವಿಧ ಸ್ಪರ್ಧೆಗಳು ನಡೆಯಲಿದೆ. ಸಮಾಜ ಬಾಂಧವರು ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ನಾಯ್ಕ್ ಅಜ್ಜಾವರ ತಿಳಿಸಿದ್ದಾರೆ.