ಶಾಸಕಿ ಕು.ಭಾಗೀರಥಿ ಮುರುಳ್ಯ ಭೇಟಿ – ಅನುದಾನದ ಭರವಸೆ
ಬೆಳ್ಳಾರೆ ಗ್ರಾಮದ ನೆಟ್ಟಾರು – ಸುತ್ತುಕೋಟೆ ರಸ್ತೆಯು ತೀವ್ರ ಹದಗೆಟ್ಟಿದ್ದು ಸುಳ್ಯ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯರವರು ಜ.19
ರಂದು ಭೇಟಿ ನೀಡಿ ರಸ್ತೆಗೆ ಅನುದಾನದ ಭರವಸೆ ನೀಡಿದರು. ಇಳಿಜಾರು ರಸ್ತೆ ಆದ ಕಾರಣ ಈ ರಸ್ತೆಯಲ್ಲಿ ವಾಹನ ಸರಾಗವಾಗಿ ಚಲಿಸಲು ತುಂಬಾ ಕಷ್ಟವಾಗುತ್ತಿದೆ. ಪರಿಶಿಷ್ಟ ಪಂಗಡದವರೇ ಹೆಚ್ಚು ಇರುವ ರಸ್ತೆ ಇದಾಗಿದ್ದು ರಸ್ತೆ ಕಾಂಕ್ರಿಟೀಕರಣ ಮಾಡಿಕೊಡುವಂತೆ ಮಾನ್ಯ ಶಾಸಕರಿಗೆ ಮನವಿಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ನೆಟ್ಟಾರು ವಾರ್ಡಿನ ಸದಸ್ಯರಾದ ಶ್ರೀಮತಿ ಗೌರಿ ನೆಟ್ಟಾರು, ಶ್ರೀಮತಿ ಶ್ವೇತಾ ಶೈಲೇಶ್ ನೆಟ್ಟಾರು, ಎಣ್ಮೂರು ಮುರುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ವಸಂತ ನಡುಬೈಲು, ರೂಪರಾಜ್ ಮುರುಳ್ಯ, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಭಾಸ್ಕರ್ ನೆಟ್ಟಾರು, ನೆಟ್ಟಾರು ಬಿಜೆಪಿ ಬೂತ್ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರತೀಕ್ ಮೊಗಪ್ಪೆ,ಕಾರ್ಯಕರ್ತರಾದ ಲೋಕೇಶ್ ನೆಟ್ಟಾರು, ವಿಶ್ವನಾಥ್, ಸಂಜೀವ ಪೆಲತ್ತಮೂಲೆ ಹಾಗೂ ರಸ್ತೆ ಫಲಾನುಭವಿಗಳು ಹಾಜರಿದ್ದರು.