ವಿದುಷಿ ಪೃಥ್ವಿ ಪಿ. ಶೆಟ್ಟಿಯವರ ಪ್ರಾಂಜಲಿ ಕಲಾನಿಕೇತನ ಭರತನಾಟ್ಯ ತರಗತಿಯ ಉದ್ಘಾಟನಾ ಕಾರ್ಯಕ್ರಮ

0

ವಿದುಷಿ ಪೃಥ್ವಿ ಪಿ. ಶೆಟ್ಟಿಯವರ ಪ್ರಾಂಜಲಿ ಕಲಾನಿಕೇತನ ಭರತನಾಟ್ಯ ತರಗತಿಯ ಉದ್ಘಾಟನಾ ಕಾರ್ಯಕ್ರಮವು ಮುರುಳ್ಯದ ಎಣ್ಮೂರಿನ ಸಾಧನಾ ಸಹಕಾರ ಸೌಧದಲ್ಲಿ ಜ. ೧೯ರಂದು ನಡೆಯಿತು. ನೂತನ ಭರತನಾಟ್ಯ ತರಗತಿಯನ್ನು ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಭರತನಾಟ್ಯಕ್ಕೆ ತನ್ನದೇ ಆದ ಹಿನ್ನೆಲೆ ಮತ್ತು ಗೌರವವಿದ್ದು ವಿಭಿನ್ನ ಕಲಾಪ್ರಕಾರವಾಗಿದೆ. ಪೋಷಕರು ಹೆಚ್ಚು ಪ್ರೋತ್ಸಾಹ ನೀಡಿ ಮಕ್ಕಳಿಗೆ ಭರತನಾಟ್ಯ ಕಲಿಯುವಂತೆ ಪ್ರೇರೆಪಿಸಬೇಕು ಎಂದರು. ಈ ಸಂದರ್ಭ ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈ ಹಾಗೂ ವಿದುಷಿ ಸ್ವಸ್ತಿಕ ಆರ್. ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮುರುಳ್ಯ ಸೊಸೈಟಿಯ ಪ್ರಮುಖರಾದ ಸುಧೀರ್, ಪ್ರಾಂಜಲಿ ಕಲಾನಿಕೇತನ ಭರತನಾಟ್ಯ ತರಗತಿಯ ಗುರು ವಿದುಷಿ ಪೃಥ್ವಿ ಪಿ. ಶೆಟ್ಟಿ, ಅವರ ತಂದೆ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದರು.


ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈ ಹಾಗೂ ವಿದುಷಿ ಸ್ವಸ್ತಿಕ ಆರ್. ಶೆಟ್ಟಿಯವರ ಶಿಷ್ಯೆ ವಿದುಷಿ ಪೃಥ್ವಿ ಪಿ. ಶೆಟ್ಟಿ ನೇತೃತ್ವದಲ್ಲಿ ಪ್ರತಿ ಭಾನುವಾರದಂದು ಬೆಳಗ್ಗೆ ೯.೩೦ರಿಂದ ೧೨ರ ತನಕ ನಡೆಯಲಿದೆ. ಸುಹಾಸ್ ಕಾರ್ಯಕ್ರಮ ನಿರೂಪಿಸಿದರು. ಹಂಸ ನಂದಿನಿ ಪ್ರಾರ್ಥಿಸಿದರು. ಛಾಯಾಗ್ರಾಹಕಾರಾಗಿ ಸೃಜನ್ ಸಹಕರಿಸಿದರು.