ಸುಳ್ಯ ಕುರುಂಜಿಗುಡ್ಡೆ ಸುಂದರ ನಾಯ್ಕ ಎಂಬವರ ಪುತ್ರ ಗಣೇಶ್ (40) ಎಂಬವರು ಬೆಂಗಳೂರಿಗೆ ಕೆಲಸಕ್ಕೆಂದು ಹೋದವರು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಗಣೇಶ ಎಂಬವರು ಕೆಲವರ್ಷದಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಇತ್ತೀಚೆಗೆ ಊರಿಗೆ ಬಂದಿದ್ದ ಅವರು ಜ.19ರಂದು ಬೆಳಗ್ಗೆ ಸುಳ್ಯದಿಂದ ಬಸ್ ಏರಿದ್ದರು. ಆದರೆ ಬೆಂಗಳೂರಿಗೆ ವಿಚಾರಿಸಿದಾಗ ತಲುಪಿಲ್ಲ ಎಂದು ತಿಳಿದುಬಂದಿದೆ ಎಂದು ಗಣೇಶರ ತಂದೆ ಸುಳ್ಯ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಚಿತ್ರದಲ್ಲಿ ಇರುವ ವ್ಯಕ್ತಿಯನ್ನು ಕಂಡವರು ಹತ್ತಿರದ ಪೋಲೀಸ್ ಠಾಣೆಗೆ ತಿಳಿಸುವಂತೆ ಪೋಲೀಸರು ತಿಳಿಸಿದ್ದಾರೆ.