ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಕಾಲಾವಧಿ ಜಾತ್ರೋತ್ಸವವು ಫೆ.13 ರಿಂದ17 ರ ತನಕ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದ್ದು ಜ.23 ಆಮಂತ್ರಣ ಪತ್ರ ಬಿಡುಗಡೆ ದೇವಳದಲ್ಲಿ ನಡೆಯಿತು.
ದೇವಳದ ಪ್ರಧಾನ ಅರ್ಚಕ ಹರ್ಷಿತ್ ಬನ್ನಿಂತಾಯ ರವರು ಪ್ರಾರ್ಥನೆ ನೆರವೇರಿಸಿದರು. ಅನುವಂಶಿಕ ಮೊಕ್ತೇಸರ ಮತ್ತು ಪವಿತ್ರ ಪಾಣಿ ಹೇಮಚಂದ್ರ ಬೈಪಡಿತ್ತಾಯ ರವರು ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಪಂಜಿಮಲೆಯಲ್ಲಿ ಫೆ.18 ಮತ್ತು 19 ರಂದು ನಡೆಯಲಿರುವ ವಿಷ್ಣುಮೂರ್ತಿ ದೈವದ ಒತ್ತೆಕೋಲದ ಆಮಂತ್ರಣವನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ಬಿಡುಗಡೆ ಮಾಡಿದರು.
ಉಳ್ಳಾಕುಲು ಚಾವಡಿಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಸನ್ನ ಕೆ.ಸಿ.ಬಡ್ಡಡ್ಕ, ಮೊಕ್ತೇಸರ ಪೈಕಿ ಶ್ರೀಪತಿ ಬೈಪಡಿತ್ತಾಯ, ಜಯಪ್ರಕಾಶ್ ಬೈಪಡಿತ್ತಾಯ,ಒತ್ತೆಕೋಲಸಮಿತಿ ಅಧ್ಯಕ್ಷ ಸುಧಾಕರ ಆಲೆಟ್ಟಿ, ಆರ್ಥಿಕ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ,ಜೀ.ಸ.ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ,ವ್ಯ.ಸ.ಸದಸ್ಯರಾದ ಹರಿಪ್ರಸಾದ್ ಕಾಪುಮಲೆ, ಸತೀಶ್ ಕುಂಭಕೋಡು, ಹರಿಪ್ರಸಾದ್ ಗಬ್ಬಲ್ಕಜೆ, ಮಮತ ನಾರ್ಕೋಡು, ಭಜನಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಒತ್ತೆಕೋಲ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಖಜಾಂಜಿ ಶ್ರೀನಾಥ್ ಆಲೆಟ್ಟಿ, ಪುರುಷೋತ್ತಮ ದೋಣಿಮೂಲೆ,ಜತ್ತಪ್ಪ ಗೌಡ ನಾಗಪಟ್ಟಣ, ಗುರು ರಾಜ್ ಭಟ್ ಎಲಿಕ್ಕಳ, ವನಜಾಕ್ಷಿ ಆಲೆಟ್ಟಿ, ನಾರಾಯಣ ರೈ ಆಲೆಟ್ಟಿ, ರಾಮಚಂದ್ರ ಬಾಳೆಹಿತ್ಲು,ಮಹೇಶ್ ಕುತ್ಯಾಳ,ಮಹಾಬಲ ರೈ ಆಲೆಟ್ಟಿ, ಉದಯ ಕುಡೆಕಲ್ಲು, ಸುಂದರ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.