ಗ್ರಾಮೀಣ ಭಾಗದಲ್ಲಿ ಸರಕಾರಿ ಕನ್ನಡ ಶಾಲೆಯನ್ನು ನೂರು ವರ್ಷ ಮುನ್ನಡೆಸಿರುವುದು ಶ್ಲಾಘನೀಯ : ಸಂಸದ ಬ್ರಿಜೇಶ್ ಚೌಟ
ಕೃಷಿ ಬದುಕಿನ ಶಿಕ್ಷಣದ ಜೊತೆಗೆ ಸಂಸ್ಕಾರದ ಪಾಠ ಈಗಿನ ವಿದ್ಯಾರ್ಥಿಗಳಿಗೆ ದೊರೆಯಬೇಕಿದೆ : ವಿಧಾನ ಪರಿಷತ್ ಸದಸ್ಯ ಬೋಜೇ ಗೌಡ
ಎಲಿಮಲೆಯ ದೇವಚಳ್ಳ ಸರಕಾರಿ ಹಿ. ಪ್ರಾ.ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ‘ಶತ ಸಂಭ್ರಮ’ವು ಇಂದು ಉದ್ಘಾಟನೆಗೊಂಡಿತು.
ವಿಧಾನಸಭಾ ಸದಸ್ಯರಾದ ಎಸ್ ಎಲ್ ಭೋಜೇಗೌಡ ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿ “ಶಿಕ್ಷಕರ ಕೊರತೆ ಶೇ. 50ರಷ್ಟು ಸರಕಾರಿ ಶಾಲೆಯಲ್ಲಿ ಇದೆ. ಸರಕಾರಿ ಶಿಕ್ಷಕರಿಗೂ ಒತ್ತಡಗಳಿವೆ. ಇವುಗಳ ಮಧ್ಯೆ ಹಿರಿಯರು ಶಿಕ್ಷಣಕ್ಕೆ ಒತ್ತು ಕೊಟ್ಟು ಶಿಕ್ಷಣ ಸಂಸ್ಥೆಯನ್ನು ಕಟ್ಟಿ, ಇದು ಇಂದು ಶತಮಾನೋತ್ಸವ ಆಚರಿಕೊಳ್ಳುತಿರುವುದನ್ನು ನೋಡಿದರೆ ಹಿರಿಯರು ಮಾಡಿದ ಕಾರ್ಯ ಬೆಲೆ ಕಟ್ಟಲಾಗದ್ದು” ಎಂದು ಹೇಳಿದರಲ್ಲದೆ, “ಡಾಕ್ಟರೇಟ್ ನಂತಹ ಪದವಿ ಪಡೆದುಕೊಳ್ಳುವ ಈ ಸಂದರ್ಭದಲ್ಲಿ ಬದುಕು ಕಟ್ಟಿಕೊಳ್ಳುವ ಕೃಷಿ ಬದುಕಿನ ಶಿಕ್ಷಣದ ಜೊತೆಗೆ ಸಂಸ್ಕಾರದ ಪಾಠ ಈಗಿನ ವಿದ್ಯಾರ್ಥಿಗಳಿಗೆ ದೊರೆಯಬೇಕಿದೆ ಎಂದು ಅವರು ಹೇಳಿದರು.
ಗ್ರಾಮೀಣ ಭಾಗದಲ್ಲಿ ಸರಕಾರಿ ಕನ್ನಡ ಶಾಲೆಯನ್ನು ನೂರು ವರ್ಷ ಮುನ್ನಡೆಸಿರುವುದು ಶ್ಲಾಘನೀಯ : ಸಂಸದ ಬ್ರಿಜೇಶ್ ಚೌಟ
ಮಕ್ಕಳ ಕೊರತೆಯನ್ನು ಎದುರಿಸುತ್ತಿರುವ ಸರಕಾರಿ ಶಾಲೆಗಳ ಪೈಕಿ ಇಂತಹ ಗ್ರಾಮೀಣ ಭಾಗದಲ್ಲಿ ನೂರು ವರ್ಷಗಳ ಹಿಂದೆ ಸರಕಾರಿ ಶಾಲೆಯನ್ನು ಸ್ಥಾಪಿಸಿ ಈಗ ಶಮಾನೋತ್ಸವ ಆಚರಿಸಿಕೊಳ್ಳುತಿರುವುದು ಶ್ಲಾಘನೀಯ ಎಂದು ದ. ಕ. ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು. ಅವರು ನೂತನ ಕೊಠಡಿ ಉದ್ಘಾಟಿಸಿ ಮಾತನಾಡಿದದು.
ನೂತನ ಕೊಠಡಿಗಳನ್ನು ಉದ್ಘಾಟನೆ ಮಾಡಿ ಮಾತನಾಡಿದ ಮಾಜಿ ಸಚಿವ ಎಸ್. ಅಂಗಾರ, ಜಿಲ್ಲಾ ಗ್ಯಾರಂಟಿ ಅನುಸ್ಟಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ನೆಲ್ಲೂರ್ ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ ಕೋಟೆಮಲೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್ಎನ್ ಮನ್ಮಥ, ದೈಹಿಕ ಶಿಕ್ಷಣ ಪರಿವೀಕ್ಷಕಿ ಆಶಾ ನಾಯಕ್, ಅಕ್ಷರ ದಾಸೋಹ ಯೋಜನೆ ಸುಳ್ಯ ಇದರ ಸಹಾಯಕ ನಿರ್ದೇಶಕಿ ವೀಣಾ ಎಂ ಟಿ, ಸೇವಾ ಸಂಗಮ ಟ್ರಸ್ಟ್ ಗೌರವಾಧ್ಯಕ್ಷ ಬಾಲಕೃಷ್ಣ ಬೊಳ್ಳೂರು, ಶಿವಾಜಿ ಫ್ರೆನಡ್ಸ್ ಅಧ್ಯಕ್ಷ ವಿನಯ ಕುಮಾರ್ ಕಲ್ಲುಪನೆ, ನಿವೃತ ಎ.ಎಸ್. ಐ.
ಕೃಷ್ಣಯ್ಯ ಕಾಣಿಕೆ, ಗೋಪಿನಾಥ್ ಮೆತ್ತಡ್ಕ, ಎಸ್. ಡಿ. ಎಂ. ಸಿ. ಅಧ್ಯಕ್ಷ ಜಯಾನಂದ ಪಟ್ಟೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಪ್ರಸಾದ್ ಬಿ. ವಿ., ಸೀತಾನಂದ ಹಲ್ದಾಡ್ಕ, ರಾಜೇಶ್ ಪಟ್ಟೆ, ಶಾಲಾ ಮುಖ್ಯ ಶಿಕ್ಷಕ ಶ್ರೀಧರ ಗೌಡ ಉಪಸ್ಥಿತರಿದ್ದರು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ಎ. ವಿ. ತೀರ್ಥರಾಮ ಸ್ವಾಗತಿಸಿ ಪ್ರಸ್ತಾವನೆಗೈದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಕಿರಣ್ ಗುಡ್ಡೆಮನೆ, ಲತಾ ಸುಪ್ರೀತ್ ಮೊಂಟಡ್ಕ ಕಾರ್ಯಕ್ರಮ ನಿರೂಪಿಸಿದರು.