ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕಿನ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನಿವಲ್ ಮಾಡುವ ಕ್ಯಾಂಪ್ ಜ. 28 ರಂದು ನಡೆಯಿತು.
ತಾಲೂಕು ಪಂಚಾಯತ್ ನ ವಿಕಲಚೇತನರ ಇಲಾಖೆಯ ಎಂಆರ್ ಡಬ್ಲ್ಯೂ ಚಂದ್ರಶೇಖರ್, ನಗರ ಪಂಚಾಯತ್ ನ ವಿಕಲ ಚೇತನರ ಇಲಾಖೆಯ ಯುಆರ್ ಡಬ್ಲ್ಯೂ ಪ್ರವೀಣ್ ನಾಯಕ್, ಇತರ ಪಂಚಾಯತ್ ಗಳ ವಿಆರ್ ಡಬ್ಲ್ಯೂ ರವರಾದ ಉಮಾವತಿ, ಪುಷ್ಪಶ್ರೀ, ಹರಿಣಿ, ಕಾವೇರಿ, ಹರ್ಷಿತ್ ವೆಂಕಟ್ರಮಣ, ಸದಾನಂದ, ಕೃಷ್ಣ ಪ್ರಸಾದ್, ಷಣ್ಮುಖ, ಉಮ್ಮರ್, ರಂಜಿನಿ, ಲಿಖಿತ, ಶರಣ್ಯ ಭವ್ಯ ಮತ್ತು ದಾದಿ ನಯನ ಉಪಸ್ಥಿತರಿದ್ದರು.
ವೈದ್ಯಾಧಿಕಾರಿ ಡಾ.ಕರುಣಾಕರ್ ಅವರ ನೇತ್ರತ್ವದಲ್ಲಿ ಎಲ್ಲ ತಜ್ಞ ವೈದ್ಯರು ಹಾಜರಿದ್ದರು.
ಹಲವಾರು ಜನ ಇದರ ಪ್ರಯೋಜನ ಪಡೆದುಕೊಂಡರು.