ಕಲ್ಮಕಾರು ಗ್ರಾಮದ ಬಾಳೆಬೈಲು ನಿವಾಸಿ ಶ್ರೀಮತಿ ಭಾಗೀರಥಿ ಪಾಂಡಿಗದ್ದೆ ಎಂಬವರು ಇಂದು ಆ್ಯಸಿಡ್ ಸೇವಿಸಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಅವರಿಗೆ 42 ವರ್ಷ ವಯಸ್ಸಾಗಿತ್ತು.
ಆ್ಯಸಿಡ್ ಸೇವಿಸಿರುವುದು ಗೊತ್ತಾದ ತಕ್ಷಣ ಹರಿಹರ ಪಳ್ಳತಡ್ಕದ ಡಾl ಗಿರೀಶ್ ಅವರಲ್ಲಿ ಕರೆ ತರಲಾಗಿದ್ದು ಅದಾಗಲೇ ಮೃತ ಪಟ್ಟಿದ್ದರು ಎನ್ನಲಾಗಿದೆ. ಬಳಿಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ ಎಂದು ತಿಳಿದು ಬಂದಿದೆ.
ಮೃತರು ಪತಿ ಉಮೇಶ್, ಪುತ್ರ ಉದಯ, ಪುತ್ರಿ ಶ್ರೀಮತಿ ವಿದ್ಯಾ ಅವರನ್ನು ಅಗಲಿರುವುದಾಗಿ ತಿಳಿದು ಬಂದಿದೆ. .