ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿದ್ದು 12 ಸ್ಥಾನದಲ್ಲೂ
ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
ಜ.30 ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಡಳಿತ ಮಂಡಳಿಗೆ ಚುನಾವಣೆ ಪ್ರಕ್ರಿಯೆ ನಡೆದಿದ್ದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲ ಒಂದು ನಾಮಪತ್ರ ಸಲ್ಲಿಕೆಯಾಗಿ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.
ಅಧ್ಯಕ್ಷರಾಗಿ ಚಂದ್ರಶೇಖರ ಶಾಸ್ತ್ರಿ ಸಿ ರವರು ಮತ್ತು ಉಪಾಧ್ಯಕ್ಷರಾಗಿ ಸದಾನಂದ ಕಾರ್ಜ ಅವಿರೋಧ ಆಯ್ಕೆಯಾದರು.
ಬಳಿಕ ಅವರನ್ನು ಹಾರ ,ಶಾಲು ಹಾಕಿ ಗೌರವಿಸಿ ಶುಭ ಹಾರೈಸಿದರು. ನಿರ್ದೇಶಕರಾದ ಸುಬ್ರಹ್ಮಣ್ಯ ಕುಳ, ಲಿಗೋಧರ ಆಚಾರ್ಯ ಎನ್ ನಾಯರ್ ಕೆರೆ, ಚಿನ್ನಪ್ಪ ಗೌಡ ಚೊಟ್ಟೆಮಜಲು, ವಾಸುದೇವ ಕೆರೆಕ್ಕೋಡಿ , ಅರುಣ್ ರೈ ಗೆಜ್ಜೆ, ಮುದರ ಐವತ್ತೊಕ್ಲು, ವಾಚಣ್ಣ ಕೆರೆಮೂಲೆ , ತಿಮ್ಮಪ್ಪ ಗೌಡ ಕೂತ್ಕುಂಜ , ಶ್ರೀಮತಿ ವನಿತಾ ಸುರೇಶ್ ಅತ್ಯಡ್ಕ, ಶ್ರೀಮತಿ ಬೇಬಿ ಭಾಸ್ಕರ ಕಟ್ಟ ಉಪಸ್ಥಿತರಿದ್ದರು.
ಬಜಪಾ ಪಕ್ಷದ ಪ್ರಮುಖರಾದ ಡಾ.ರಾಮಯ್ಯ ಭಟ್,ಶಿವರಾಮಯ್ಯ ಕರ್ಮಾಜೆ ವೆಂಕಟೇಶ್ವರ ಜೋಯಿಸ, ಬಜಪಾ ಶಕ್ತಿ ಕೇಂದ್ರದ ಪ್ರಮುಖರಾದ ಶರತ್ ಕುದ್ವ, ಹರೀಶ್ ಕಾರ್ಜ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಕಟಪೂರ್ವಧ್ಯಕ್ಷ ಗಣೇಶ್ ಪೈ, ಪೂರ್ವ ನಿರ್ದೇಶಕರಾದ ರಘುನಾಥ ರೈ ಕೆರೆಕ್ಕೋಡಿ, ಶ್ರೀಕೃಷ್ಣ ಭಟ್ ಪಟೋಳಿ, ಶ್ರೀಮತಿ ಹೇಮಲತಾ ಚಿದ್ಗಲ್ಲು, ಶ್ರೀಮತಿ ಮೋಹಿನಿ ಬೊಳ್ಮಲೆ,ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಸುವರ್ಣಿನಿ ಎನ್ ಎಸ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಚಂದ್ರಶೇಖರ ದೇರಾಜೆ, ಜಗದೀಶ್ ಪುರಿಯ, ಶ್ರೀಮತಿ ವೀಣಾ ಪಕ್ಷದ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿ ಶಿವಲಿಂಗಯ್ಯ ರವರು ಕರ್ತವ್ಯ ನಿರ್ವಹಿಸಿದರು. ವಲಯ ಮೇಲ್ವಿಚಾರಕ ಪ್ರದೀಪ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.