ಗೋವಾ ಸರಕಾರದ ಈ ಬಾರಿಯ ಪ್ರತಿಷ್ಟಿತ ಕೊಂಕಣಿ ಆಕಾಡೆಮಿ ಪ್ರಶಸ್ತಿಗೆ, ಬೆಳ್ಳಾರೆ ಸಮೀಪದ ಬಾಚೊಡಿ ಡಾ ದೇವದಾಸ ಪೈ ಇವರು ಆಯ್ಕೆಯಾಗಿರುತ್ತಾರೆ.
ಗೋವಾ ರಾಜ್ಯದ ಹೊರಗಡೆ, ಅಂದರೆ ಕರ್ನಾಟಕ ರಾಜ್ಯದಲ್ಲಿ ಕೊಂಕಣಿ ಆಕಾಡೆಮಿ ರಿಜಿಸ್ತ್ರಾರ್ರಾಗಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಂಕಣಿ ವಿಭಾಗಸ್ಥಾಪನೆ ಹಾಗೂ ಪಠ್ಯಕ್ರಮ ಪರೀಕ್ಷಾ ಪದ್ಧತಿ ಅಭಿವೃದ್ಧಿ, ಹಾಗೂ ಪ್ರಸ್ತುತ ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ನಡೆಸುತ್ತಿರುವ ಕೊಂಕಣಿ ಭಾಷಾವಿಜ್ಞಾನ ಸಂಶೋಧನಾ ಸೇವೆ ಇತ್ಯಾದಿಗಳನ್ನು ಪರಿಗಣಿಸಿ ಡಾ ಪೈ ಯವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ವಿಶೇಷವೆಂದರೆ, ಮೂಲತಹ ಭೌತಶಾಸ್ತ್ರ ಉಪನ್ಯಾಸಕರಾಗಿದ್ದು, ಸರಕಾರಿ ಪ.ಪೂ.ಕಾಲೇಜು ಗಳಲ್ಲಿ, ಮಂಗಳೂರಿನ ಬಿ.ಎಡ್. ಕಾಲೇಜಿನಲ್ಲಿ ಭೊಧನಾಕಾರ್ಯ ಹಾಗೂ ಉಡುಪಿ ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖಾ ಸಹಾಯಕ ನಿರ್ದೇಶಕರಾಗಿಯೂ ಸೇವೆಸಲ್ಲಿಸಿರುತ್ತಾರೆ. ಬೆಳ್ಳಾರೆಯ ಸರಕಾರಿ ಪ ಪೂ ಕಾಲೇಜಿನಲ್ಲಿ ಶಿಕ್ಷಣದ ಪೂರೈಸಿರುವ ಇವರು ದೆಹಲಿಯ ಎನ್.ಸಿ.ಆರ್.ಟಿ. ಮಾರ್ಗದರ್ಶನದಲ್ಲಿ ಪಿಹೆಚ್.ಡಿ. ಪದವಿ ಪಡೆದಿರುತ್ತಾರೆ.
ಸುಳ್ಯದ ಸರಕಾರಿ ಕಾಲೇಜಿನ ಪ್ರಾರಂಭಿಕ ವರ್ಷಗಳಲ್ಲಿ ಖಾಯಂ ಉಪನ್ಯಾಸಕರ ನೇಮಕಾತಿಯಾಗುವ ಮೊದಲು ಬಿ. ಎಸ್ಸಿ. ಪದವಿಯ ಭೌತಶಾಸ್ತ್ರ ಭೊದನಾಕಾರ್ಯವನ್ನು ನಡೆಸಿ ವಿದ್ಯಾರ್ಥಿಗಳ ಮೆಚ್ಚುಗೆಗಳಿಸಿದ್ದರು. ಫೆ.೨೦೨೫ರ ದಿನಾಂಕ ೪ ರಂದು ಗೋವಾದ ಪಣಜಿ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ರೂ.೫೦,೦೦೦ ನಗದು, ಗೌರವ ಫಲಕಗಳೊಂದಿಗೆ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.