ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ 67ನೇ ರಾಷ್ಟೀಯ ಶೂಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ 10ಮಿ ರೈಫಲ್ ಸಬ್ ಯೂತ್ ಮೆನ್ (ಯು -19), ರಾಷ್ಟ್ರ ಮಟ್ಟದಲ್ಲಿ ವೈಯಕ್ತಿಕವಾಗಿ ಸಾಧನೆ ಮಾಡಿದ್ದಾರೆ.
ಹಿಮಾನ್ಶು ಕುಕ್ಕೆ ಸುಬ್ರಮಣ್ಯದ ವೆಂಕಟಾಪುರ ಶಿವಪ್ರಸಾದ್ ಮುದ್ದಾಜೆ ಮತ್ತು ವಿಜಯಲಕ್ಷ್ಮಿ ದಂಪತಿಗಳ ಪುತ್ರ.
ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ತಂಡವನ್ನು ಪ್ರತಿನಿಧಿಸಿರುವ ಹಿಮಾನ್ಶುರವರು ಕೇರಳದ ತಿರುವಾನಂತಪುರಂ ಹಾಗೂ ಗೋವಾದಲ್ಲಿ ನಡೆದ ಪೂರ್ವ – ರಾಷ್ಟ್ರ ಮಟ್ಟದ ಸ್ಪ್ರರ್ಧೆಯಲ್ಲಿ ಅರ್ಹತೆ ಪಡೆದು, ಬೋಪಾಲ್ ನಲ್ಲಿ ನಡೆಯುವ ಶೂಟಿಂಗ್ ಸ್ಪರ್ಧೆಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಪ್ರಸ್ತುತ ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.