ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶ್ರೀನಾಥ್ ನೆಲ್ಲಿಕುಂಜ ಆಯ್ಕೆ

0

ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಶ್ರೀ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನ ಇದರ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.


ಅಧ್ಯಕ್ಷ ರಾಗಿ
ಶ್ರೀನಾಥ್ ನೆಲ್ಲಿಕುಂಜ ದೊಡ್ಡತೋಟ ಇವರು ಅವಿರೋಧವಾಗಿ ಆಯ್ಕೆಯಾದರು.
ವೆಂಕಟ್ರಮಣ ಇಟ್ಟಿಗುಂಡಿ ಸೂಚಿಸಿ, ಬಾಲಕೃಷ್ಣ ಬೊಳ್ಳೂರು ಅನುಮೋದನೆ ಮಾಡಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ
ದೈವಸ್ಥಾನದ ಆರ್ಚಕರಾದ ಮಾಧವ ಗೌಡ ಪೂಜಾರಿ ಮನೆ,
ನಾಗೇಶ್ ಚೂಂತಾರು ಚೊಕ್ಕಾಡಿ, ವೆಂಕಟ್ರಮಣ ಇಟ್ಟಿಗುಂಡಿ , ಬಾಲಸುಬ್ರಹ್ಮಣ್ಯ ಎಂ.ಮೋಂಟಡ್ಕ ಬಾಲಕೃಷ್ಣ ಗೌಡ ಬಿ.ಬೊಳ್ಳೂರು , ಕೆ.ಸೀತಾರಾಮ ನಾಯ್ಕ ಕಣಿಪ್ಪಿಲ, ಧನಲಕ್ಷ್ಮಿ ಕೆ.ಕೊಳಂಬೆ , ಸರೋಜ ಹಿರಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.