ಜೇಸಿಐ ತರಬೇತಿ ಕಾರ್ಯಕ್ರಮ : ಔಟ್ ಸ್ಟ್ಯಾಂಡಿಂಗ್ ಪಾರ್ಟಿಸಿಪೇಟ್ ಆಗಿ ಶಶ್ಮಿಭಟ್ ಅಜ್ಜಾವರ

0

ಕಾರ್ಕಳ ದಲ್ಲಿ ನಡೆದ ಎರಡು ದಿನಗಳ ಜೇಸಿಐ ವಲಯ 15ರ ಘಟಕಾಧಿಕಾರಿಗಳ ತರಬೇತಿ ಶಿಬಿರ – LOTS-2025 ಕಾರ್ಯಕ್ರಮದಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯ ಕೋಶಧಿಕಾರಿ ಜೇಸಿ ಶಶ್ಮಿ ಭಟ್ ಅಜ್ಜಾವರ ಅವರು ಔಟ್ ಸ್ಟ್ಯಾಂಡಿಂಗ್ ಪಾರ್ಟಿಸಿಪೇಟ್ ಆಗಿ ಮೂಡಿಬಂದಿದ್ದಾರೆ. ಜೇಸಿಐ ವಲಯ 15ರ ವಲಯಾಧ್ಯಕ್ಷ ಜೇಸಿಐ ಸೆನೆಟರ್ ಅಭಿಲಾಷ್ ಬಿ ಎ, ತರಬೇತುದಾರರಾದ ಪೂರ್ವ ರಾಷ್ಟೀಯ ಅಧ್ಯಕ್ಷ ಜೇಸಿ TVN ಮೂರ್ತಿ, ಪೂರ್ವ ರಾಷ್ಟೀಯ ಉಪಾಧ್ಯಕ್ಷ ಜೇಸಿಐ ಸೆನೆಟರ್ ಸದಾನಂದ ನಾವಡ, ಪೂರ್ವ ವಲಯಾಧ್ಯಕ್ಷ ಜೇಸಿಐ ಸೆನೆಟರ್ ಕೃಷ್ಣಮೋಹನ್ ಹಾಗೂ ತರಬೇತಿ ಶಿಬಿರದ ಸಭಾಧ್ಯಕ್ಷ JFM ಅಜಿತ್ ಕುಮಾರ್ ರೈ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ತರಬೇತಿ ಶಿಬಿರದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಸುರೇಶ್ ಕಾಮತ್, ಹಾಗೂ ಶ್ರೀಮತಿ ತಾರಮಾಧವ ಭಾಗವಹಿಸಿದ್ದರು.