ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಧನಸಹಾಯ

0

ಪಂಜ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ )
ಬಿ ಸಿ ಟ್ರಸ್ಟ್,ಸುಳ್ಯ ತಾಲೂಕು ಬಲ್ಪ ಗ್ರಾಮದ ಎಣ್ಣೆಮಜಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ರೂ 50,000 ಡಿಡಿ ಸುಳ್ಯ ತಾಲ್ಲೂಕು ಯೋಜನಾಧಿಕಾರಿ ಮಾಧವ ರವರು ದೇವಸ್ಥಾನದ ಆಡಳಿತ ಮಂಡಳಿಯವರಿಗೆ ವಿತರಣೆ ಮಾಡಿದರು.

ಈ ಸಂದರ್ಭ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು ನಿತ್ಯಾನಂದ, ಗೌರವಾಧ್ಯಕ್ಷರು ಬಾಲಕೃಷ್ಣ ಗೌಡ, ಬ್ರಹ್ಮಕಳಶ ಸಮಿತಿ ಅಧ್ಯಕ್ಷರು ರಮಾನಂದ, ದೇವಸ್ಥಾನದ ಪದಾಧಿಕಾರಿಗಳು, ಎಣ್ಣೆಮಜಲು ಒಕ್ಕೂಟದ ಅಧ್ಯಕ್ಷರು ಶೈಲಜಾ, ಪಂಜ ವಲಯ ಮೇಲ್ವಿಚಾರಕರು ಕಲಾವತಿ, ಸೇವಾಪ್ರತಿನಿಧಿ ಧನ್ಯ ಹಾಗೂ ಸಂಘದ ಸದಸ್ಯರು,ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.