13 ರಲ್ಲಿ 11 ಸ್ಥಾನವನ್ನು ಗೆದ್ದ ಸಹಕಾರ ಭಾರತಿ, 2 ಸ್ಥಾನಗಳನ್ನಷ್ಟೇ ಪಡೆದುಕೊಂಡ ಸಹಕಾರಿ ಸಮನ್ವಯ ರಂಗ
ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕಾಗಿ ಮುಂದಿನ 5 ವರ್ಷಗಳ ಅವಧಿಗೆ ಚುನಾವಣೆ ಫೆ. 7ರಂದು ನಡೆದಿದ್ದು, ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು 11 ಸ್ಥಾನಗಳಲ್ಲಿ ಬಹುಮತ ಪಡೆದರೆ, ಕಾಂಗ್ರೆಸ್ ನಾಯಕ ಕಳಂಜ ವಿಶ್ವನಾಥ ರೈ ನೇತೃತ್ವದ ಸಹಕಾರಿ ಸಮನ್ವಯ ರಂಗ 2 ಸ್ಥಾನಗಳನ್ನು ಗೆದ್ದುಕೊಳ್ಳಲು ಶಕ್ತವಾಯಿತು.
ಸಹಕಾರ ಭಾರತಿಯ ಪ್ರಭಾಕರ ಆಳ್ವ 544, ಅಜಿತ್ ರಾವ್ 523, ರವಿಪ್ರಸಾದ್ ರೈ ಕಳಂಜ 495, ರಾಮಪ್ರಸಾದ್ ಕಾಂಚೋಡು 494, ಹರ್ಷ ಜೋಗಿಬೆಟ್ಟು 466, ಮಹಿಳಾ ಮೀಸಲು ಸ್ಥಾನದಿಂದ ಸರಿತಾ ಕಂಡಿಕಟ್ಟ 552, ಪಂಕಜಾಕ್ಷಿ 549, ಪ್ರವರ್ಗ ಎ ಕ್ಷೇತ್ರದಿಂದ ಪ್ರಶಾಂತ್ ಕುಮಾರ್ 590, ಪ್ರವರ್ಗ ಬಿ ಕ್ಷೇತ್ರದಿಂದ ರವೀಂದ್ರ ಟಪ್ಪಾಲುಕಟ್ಟೆ 398, ಪ.ಪಂಗಡ ಶುಭ ಕುಮಾರ್ ಬಾಳೆಗುಡ್ಡೆ 622, ಪ.ಜಾತಿ ಮೀಸಲು ಕ್ಷೇತ್ರದಿಂದ ರಾಮಣ್ಣ ಪರವ 576 ಮತಗಳನ್ನು ಪಡೆದು ವಿಜೇತರಾದರೆ, ಸಹಕಾರಿ ಸಮನ್ವಯ ರಂಗದ ಅಭ್ಯರ್ಥಿಗಳಾದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಎನ್. ವಿಶ್ವನಾಥ ರೈ 465 ಹಾಗೂ ಸುಬ್ರಾಯ ಭಾರದ್ವಾಜ ಕೆದಿಲ 423 ಮತಗಳನ್ನು ಪಡೆದು ವಿಜೇತರಾಗಿದ್ದಾರೆ.
ಪರಾಜಿತ ಅಭ್ಯರ್ಥಿಗಳು















ಸಹಕಾರ ಭಾರತಿ ಬೆಂಬಲಿತರಾಗಿ ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸಿದ್ದ ಗಣೇಶ್ ಮುದ್ದಾಜೆ 420 ಮತ್ತು ವೆಂಕಟ್ರಮಣ ಗೌಡ ಟಿ 407 ಮತಗಳನ್ನು ಪಡೆದು ಪರಾಜಿತರಾದರೆ, ಸಹಕಾರಿ ಸಮನ್ವಯ ರಂಗದ ಈಶ್ವರ ಗೌಡ ಕೆ.ಬಿ 320, ಬಾಲಕೃಷ್ಣ ರೈ ಪಿ 345, ಶೇಖರ ಗೌಡ ಕೆ.ಪಿ 290, ಸುಬ್ರಹ್ಮಣ್ಯ ಕೆ.ಎಲ್. 341, ಸುಭಾಶ್ಚಂದ್ರ ರೈ 371, ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಸರಸ್ವತಿ ಕಾಮತ್ 481, ಶೈಲಜಾ ಎಸ್. ಪೂಜಾರಿ 338, ಹಿ.ಪ್ರ. ಎ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗಂಗಾಧರ ಗೌಡ ಕಾಯಾರ 232, ಪರಿಶಿಷ್ಟ ಪಂಗಡದಿಂದ ಸ್ಪರ್ಧಿಸಿದ್ದ ವಿಶ್ವನಾಥ ಎಂ. 378 ಮತ್ತು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ರಮೇಶ್ ಕೆ 378 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಪಕ್ಷೇತರರಾಗಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೌಶಿಕ್ ಕೊಡಪಾಲ 232, ರಮೇಶ್ ಗೌಡ ಎಂ 78 ಮತಗಳನ್ನು ಪಡೆದು ಪರಾಭವಗೊಂಡರೆ, ಪ್ರವರ್ಗ ಎ ಸ್ಥಾನದಿಂದ ಸ್ಪರ್ಧಿಸಿದ್ದ ಶ್ರೀಧರ ಪಿ 342, ಹಿ.ಪ್ರವರ್ಗ ಕರುಣಾಕರ ಶೆಟ್ಟಿ ನಾಲ್ಗುತ್ತು 232, ವೆಂಕಟ್ರಮಣ ಗೌಡ ಕಜೆಮೂಲೆ 65 ಮತಗಳನ್ನಷ್ಟೇ ಪಡೆದು ಪರಾಜಿತರಾದರು.
ಸಹಕಾರ ಭಾರತಿ ವತಿಯಿಂದ 266 ಮತಗಳನ್ನು ಮತ್ತು ಸಮನ್ವಯ ರಂಗದ ವತಿಯಿಂದ 200 ಮತಗಳನ್ನು ನ್ಯಾಯಾಲಯದ ಮೂಲಕ ತರಿಸಿಕೊಂಡಿದ್ದುದರಿಂದ ಮುಂದಿನ ನ್ಯಾಯಾಲಯದ ಆದೇಶ ಬರುವ ತನಕ ಚುನಾವಣಾ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.










