ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರದ ಆರೋಪ : ಆರೋಪಿ ದೋಷ ಮುಕ್ತ

0

ಅತ್ಯಾಚಾರ ಆರೋಪದಡಿಯಲ್ಲಿ‌ ಬಂಧಿತನಾಗಿದ್ದ ಆರೋಪಿಯ ಆರೋಪ ಸಾಬೀತು ಪಡಿಸುವಲ್ಲಿ ಅಭಿಯೋಜನೆಯು ವಿಫಲಗೊಂಡಿರುವುದರಿಂದ ಆರೋಪಿಯನ್ನು ದೋಷಮುಕ್ತಗೊಳಿಸಿ ನ್ಯಾಯಾಲಯವು ಆದೇಶ ಮಾಡಿದೆ.

2016 ನೇ            ಅಕ್ಟೋಬರ್ ತಿಂಗಳಿನಲ್ಲಿ  ಬಾಲಕಿಯೊಬ್ಬಳು ಸುಳ್ಯ ಆಸ್ಪತ್ರೆಯೊಂದರಲ್ಲಿ ತನ್ನ ದೊಡ್ಡಪ್ಪ ನ  ಆರೈಕೆ ಮಾಡಿಕೊಳ್ಳುತ್ತಿರುವ ಸಂದರ್ಭ ಆಸ್ಪತ್ರೆಗೆ ಊಟ ತರುತ್ತಿದ್ದ ಆರೋಪಿ ಅಜ್ಜಾವರದ ಮಂಜುನಾಥ ಎಂಬಾತನು ಆ ಬಾಲಕಿಯ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು ಪರಿಚಯ ಮಾಡಿಸಿಕೊಂಡು ನಂತರದ ದಿನಗಳಲ್ಲಿ ಬಾಲಕಿಯನ್ನು ಹಲವಾರು ಕಡೆಗಳಿಗೆ ಕರೆದುಕೊಂಡು ಹೋಗಿ ಅವಳಿಗೆ ಲೈಂಗಿಕ ಕಿರುಕುಳ ನೀಡಿದ್ದು, ಅವಳಿಗೆ ಮೋಸ ಹಾಗೂ ವಂಚನೆ ಎಸಗಿರುತ್ತಾನೆ ಎಂದು ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು.  ಆರೋಪಿಯ ವಿರುದ್ಧ  ಆಗಿನ ಸುಳ್ಯ ವೃತ ನಿರಿಕ್ಷಕರಾದ ಸತೀಶ್  ರವರು ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಬಳಿಕ ಪ್ರಕರಣ ದಲ್ಲಿ ಸುಮಾರು 31 ಸಾಕ್ಷಿದಾರರನ್ನು ವಿಚಾರಣೆ ನಡೆಸಿದ ದ.ಕ ಜಿಲ್ಲಾ ಮಂಗಳೂರಿನ ಐದನೇ ಹೆಚ್ಚುವರಿ ನ್ಯಾಯಾಲಯ ಪುತ್ತೂರು ಇದರ ನ್ಯಾಯಾಧೀಶೆಯಾದ ಶ್ರೀಮತಿ ಸರಿತಾ ಡಿ. ರವರು ಅಭಿಯೋಜನೆಯು ಮಾಡಲಾದ ಆರೋಪವನ್ನು ಸಾಭಿತುಪಡಿಸುವಲ್ಲಿ ಅಭಿಯೋಜನೆಯು ವಿಫಲಗೊಂಡಿದೆ ಎಂಬ ಕಾರಣವನ್ನು ನೀಡಿ ಆರೋಪಿ ಮಂಜುನಾಥ ಎಂಬಾತನನ್ನು ಆರೋಪದಿಂದ ದೋಷ ಮುಕ್ತ ಗೊಳಿಸಿ ದಿನಾಂಕ : 31/01/2025 ರಂದು ತೀರ್ಪು ನೀಡಿದ್ದಾರೆ.

ಆರೋಪಿ ಪರವಾಗಿ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ಚಂಪಾ ವಿ ಗೌಡ, ರಾಜೇಶ್ ಬಿ.ಜಿ ,ಶ್ಯಾಮ್ ಪ್ರಸಾದ್ ಎನ್.ಕೆ. ವಾದಿಸಿದ್ದರು.