ಸದ್ಗುರುಶ್ರೀ ರಾಮರವರ ದಿವ್ಯ ಮಾರ್ಗದರ್ಶನ
ಉಪಾಸನ ಫೌಂಡೇಶನ್ ನ ಉಪಾಸಕರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಫೌಂಡೇಶನ್ ಮುಖ್ಯಸ್ಥ ಸದ್ಗುರುಶ್ರೀ ರಾಮರವರ ಮಾರ್ಗದರ್ಶನದಲ್ಲಿ ಸುಳ್ಯದ ಗೌಡ ಸಮುದಾಯ ಭವನದಲ್ಲಿ ಮನೋಶಕ್ತಿ ಕಾರ್ಯಗಾರ ಫೆ. 9ರಂದು ನಡೆಯಲಿದೆ.
ಸದ್ಗುರು ಶ್ರೀಗಳು ಮೂಲತಹ ಬೆಂಗಳೂರಿನವರಾಗಿದ್ದು, ಆಸಕ್ತರಿಗೆ ಕ್ರಿಯಾಯೋಗ, ಮನೋಶಕ್ತಿ, ಸಮೂಹನ ತಂತ್ರ, ಶಕ್ತಿ ಕ್ರಿಯಾ, ಕುಂಡಲಿನಿ ದೀಕ್ಷೆ, ದೇವಿ ಸಾಧನಾ ದೀಕ್ಷೆ ಅನ್ನೋ ವಿದ್ಯೆಗಳನ್ನು ಈಗಾಗಲೇ ಧಾರೆ ಎರೆಯುತ್ತಿದ್ದಾರೆ.
14 ವರ್ಷ ಮೇಲ್ಪಟ್ಟವರಿಗೆ ನಡೆಯುವ ಈ ಕಾರ್ಯಗಾರಕ್ಕೆ ಈಗಾಗಲೇ ಸುಮಾರು 400 ಕ್ಕಿಂತಲೂ ಹೆಚ್ಚು ಜನ ರೂ. 1000/- ಗುರುದಕ್ಷಿಣೆ ನೀಡಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ.