ಸುಳ್ಯ ಸರ್ಕಾರಿ ಆಸ್ಪತ್ರೆಯ ನಿವೃತ್ತ ಸಿಬ್ಬಂದಿ ಶಿವರಾಮ ಕೆ.ಪಿ.ಕೊರಂಬಡ್ಕ ಹೃದಯಾಘಾತದಿಂದ ನಿಧನ

0

ಸುಳ್ಯ ಕಸಬಾ ಗ್ರಾಮದ ಪೈಚಾರು, ಶಾಂತಿನಗರ ನಿವಾಸಿ ಶಿವರಾಮ ಕೆ.ಪಿ. ಕೊರಂಬಡ್ಕರವರು ಹೃದಯಾಘಾತದಿಂದ ಫೆ. 7ರಂದು ನಿಧನರಾದರು.

ಮೃತರಿಗೆ 68 ವರ್ಷ ವಯಸ್ಸಾಗಿತ್ತು.

ಇವರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಫಾರ್ಮಸಿಸ್ಟ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.

ಪತ್ನಿ ಪದ್ಮಾವತಿ, ಪುತ್ರಿಯರಾದ ಅನುಷಾ, ಮಾನಸ ಹಾಗೂ ಕುಟುಂಬಸ್ಥರು, ಬಂದು ಮಿತ್ರರನ್ನು ಅಗಲಿದ್ದಾರೆ.