ಅರಂತೋಡು ಗ್ರಾಮದ ಅಡಿಗಾರ ನಾರಾಯಣ ಗೌಡ (ಅಚ್ಚುಮ) (72) ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮನೆಯಲ್ಲಿ ವಿಷ ಸೇವಿಸಿ ಅಸ್ವಸ್ಥರಾದ ಅವರನ್ನು ಅರಂತೋಡು ಸೊಸೈಟಿಯ ಅಂಬ್ಯುಲೆನ್ಸ್ ಮೂಲಕ ತಂದು ಸುಳ್ಯ ಸರಕಾರಿ ಆಸ್ಪತ್ರೆ ಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.
ಆತ್ಮಹತ್ಯೆ ಗೆ ಕಾರಣ ತಿಳಿದು ಬಂದಿಲ್ಲ.
ಪತ್ನಿ ಚಂದ್ರಾವತಿ, ಪುತ್ರ ಬಾಲಚಂದ್ರ ಹಾಗೂ ಪುತ್ರಿಯರಾದ ನಂದಿನಿ, ರಮ್ಯ ಹಾಗೂ ಬಂಧುಗಳನ್ನು ಅಗಲಿದ್ದಾರೆ.