ಸಂಪಾಜೆ ಗ್ರಾಮದ ಗೂನಡ್ಕದ ಮಸೀದಿಯ ಬಳಿ ಎರಡು ಕಾರುಗಳ ಮಧ್ಯೆ ಹಾಗೂ ನಿಲ್ಲಿಸಿದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ವಾಹನಗಳು ಜಖಂಗೊಂಡ ಘಟನೆ ಇಂದು ಸಂಜೆ ನಡೆದಿದೆ.
ಮಡಿಕೇರಿಯಿಂದ ಸುಳ್ಯ ಕಡೆ ಬರುತ್ತಿದ್ದ ಮತ್ತು ಸುಳ್ಯ ದಿಂದ ಮಡಿಕೇರಿ ಕಡೆ ತೆರಳುವ ವಾಹನಗಳ ನಡುವೆ ಪರಸ್ಪರ ಡಿಕ್ಕಿಯಾಗಿದೆ. ಪರಿಣಾಮವಾಗಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಯಾರಿಗೂ ಗಾಯಗಳಾಗಿಲ್ಲ. ವಾಹನಗಳು ಜಖಂಗೊಂಡಿದೆ.