








ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರಾಗಿ ಕೆ.ಕೆ.ಹರಿಪ್ರಸಾದ್ ಕೋಚನ ನೇಮಕವಾಗಿದ್ದಾರೆ.
ಹರಿ ಪ್ರಸಾದ್ ರವರು ಸುಳ್ಯ ತಾಲೂಕು ಎನ್.ಎಸ್.ಯು.ಐ ಯ ಅಧ್ಯಕ್ಷರಾಗಿ, ಯುವಕಾಂಗ್ರೆಸ್ ಪ್ರ ಕಾರ್ಯದರ್ಶಿಯಾಗಿ, ದ.ಕ ಜಿಲ್ಲಾ ರಾಹುಲ್ ಬ್ರಿಗೇಡ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ,ನಂತರ ದ.ಕ ಜಿಲ್ಲಾ ಮಾಧ್ಯಮ ವಿಭಾಗವನ್ನು ಮುನ್ನಡೆಸಿ , ಕೆಪಿಸಿಸಿ ಮಾಧ್ಯಮ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿದ್ದ ಇವರು
ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿಯ ಸದಸ್ಯರಾಗಿ ಸರಕಾರದಿಂದ ನೇಮಕವಾಗಿರುತ್ತಾರೆ.ಪ್ರಸ್ತುತ ಇವರು ಮಡಿಕೇರಿ ಯಲ್ಲಿ ನೆಲೆಸಿದ್ದಾರೆ.
ಸಮಿತಿಯ ಅಧ್ಯಕ್ಷರಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹಾಗೂ 4 ಮಂದಿ ಸದಸ್ಯ ರನ್ನೊಳಗೊಂಡಿದೆ.










