ಇಂದು ಐವರ್ನಾಡಿನಲ್ಲಿ ವಿಜೃಂಭಿಸಲಿದೆ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ

0

ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟಕ್ಕೆ ನೂರಾರು ಜನರಿಂದ ಭರದ ಸಿದ್ಧತೆ

ದೇಶದ ಪ್ರತಿಷ್ಠಿತ 12 ಕ್ರೀಡಾ ತಂಡಗಳು, ಕ್ರೀಡಾಪಟುಗಳು ಭಾಗಿ

ಗೆಳೆಯರ ಬಳಗ ಐವರ್ನಾಡು ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್, ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಮಂಗಳೂರು ಹಾಗೂ ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ಆಹ್ವಾನಿತ 12 ತಂಡಗಳ ಅಂತರ್ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟವು ಫೆ.22 ಮತ್ತು ಫೆ.23 ರಂದು ಐವರ್ನಾಡು ಸ.ಪ.ಪೂ.ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಕಬಡ್ಡಿ ಪಂದ್ಯಾಟಕ್ಕೆ ನೂರಾರು ಜನರಿಂದ ಭರದ ಸಿದ್ಧತೆಗಳು ನಡೆಯುತ್ತಿದೆ.
ಕಬಡ್ಡಿ ಕೋರ್ಟ್ ಗೆ ಮ್ಯಾಟ್ ಅಳವಡಿಕೆ,3500 ಜನ ಕುಳಿತುಕೊಳ್ಳುವ ಗ್ಯಾಲರಿ ನಿರ್ಮಾಣ ,ಲೈಟಿಂಗ್ಸ್ ಹಾಗೂ ಇನ್ನಿತರ ಕೆಲಸಗಳು ಭರದಿಂದ ನಡೆಯುತ್ತಿದೆ.


ಅಂತರಾಜ್ಯ ಮಟ್ಟದ ಬಲಿಷ್ಟ 12 ತಂಡಗಳು ಭಾಗವಹಿಸಲಿದ್ದು
ಒಟ್ಟು 21 ಮ್ಯಾಚ್ ನಡೆಯಲಿದೆ.
ಕಬಡ್ಡಿ ಪಂದ್ಯಾಟವನ್ನು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಉದ್ಘಾಟಿಸಲಿದ್ದಾರೆ.
ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಎಸೋಸಿಯೇಶನ್ ಚೇರ್ ಮೆನ್ ರಾಕೇಶ್ ಮಲ್ಲಿ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಭಾಗೀರಥಿ ಮುರುಳ್ಯ
ಸಹಿತ ಹಲವು ಮಂದಿ ಅತಿಥಿಗಳಾಗಿ ಉಪಸ್ಥಿತರಿರುವರು.