ಫೆ.26: ಪಂಜ ಲಯನ್ಸ್ ಕ್ಲಬ್ ಗೆ: ಲಯನ್ಸ್ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮ

0

ಹಲವು ಸೇವಾ ಚಟುವಟಿಕೆಗಳಿಗೆ ಚಾಲನೆ

ಲಯನ್ಸ್ ಕ್ಲಬ್ ಪಂಜ ಕಳೆದ 15 ವರ್ಷಗಳಿಂದ ಪಂಜ ಪರಿಸರದಲ್ಲಿ ಕಾರ್ಯಾಚರಿಸುತ್ತಿದ್ದು ತನ್ನ ಸಾಮಾಜಿಕ ಸೇವೆಗಳಿಂದ ಜನಸಾಮಾನ್ಯರ ಪ್ರೀತಿಗೆ ಪಾತ್ರವಾದ ಸಂಸ್ಥೆಯಾಗಿದೆ. ಇದೇ ಬರುವ ಫೆ. 26 ರಂದು ಲಯನ್ಸ್ ಜಿಲ್ಲೆ 317 ‘ಡಿ’ಯ ರಾಜ್ಯಪಾಲರಾಗಿರುವ ಲ.ಬಿ.ಎಮ್ ಭಾರತಿ PMJFD8 ಅಧಿಕೃತನಾಗಿ ಕ್ಲಬ್ ಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಕ್ಲಬ್ ನ ವತಿಯಿಂದ ನಡೆಯುವ ಹಲವಾರು ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಪಂಜ ಲಯನ್ಸ್ ಕ್ಲಬ್ ನ ಅಧ್ಯಕ್ಷ ಲ.ಶಶಿಧರ ಪಳಂಗಾಯ ರವರು ಲಯನ್ಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ತಿಳಿಸಿದರು.ಸಂಜೆ ಗಂಟೆ 4 ಕ್ಕೆ ಸರಿಯಾಗಿ ಏನೆಕಲ್ಲಿನ ಪುಂಡಿಗದ್ದೆಯಲ್ಲಿ ನೂತನವಾಗಿ ನಿರ್ಮಿಸಿರುವ “ದಿ.ಶಿವಪ್ಪ ಗೌಡ ಪಳಂಗಾಯ ಸ್ಮರಣ ಬಸ್ಸು ತಂಗುದಾಣ” ವನ್ನು ರಾಜ್ಯಪಾಲರು ಲೋಕಾರ್ಪಣೆ ಗೊಳಿಸಲಿದ್ದಾರೆ. ನಂತರ ಕ್ಲಬ್ ನ ಅಧ್ಯಕ್ಷ ಲ.ಶಶಿಧರ ಪಳಂಗಾಯ ಇವರ ಮನೆಯಲ್ಲಿ ನಡೆಯುವ ಕ್ಲಬ್ ನ ಸದಸ್ಯರ ಸಲಹಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಪಂಜದ ಲಯನ್ಸ್‌ ಭವನದಲ್ಲಿ ನಡೆಯುವ ಅಧಿಕೃತ ಭೇಟಿಯ ಸಮಾರಂಭದಲ್ಲಿ ಹಲವಾರು ಸೇವಾ ಚಟುವಟಿಕೆಗಳು ನಡೆಯಲಿದೆ. ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಗೆ ನಿರಂತರ ಅಕ್ಕಿ ನೀಡುವ ಯೋಜನೆಯಾದ ‘ಅನ್ನಭಾಗ್ಯ’ ಯೋಜನೆ, ಬಡರೋಗಿಯೋರ್ವರಿಗೆ ವೀಲ್ ಚಯರ್ ಹಸ್ತಾಂತರ, ಬಡ ಕುಟುಂಬಗಳಿಗೆ ಆರ್ಥಿಕ ಸಹಕಾರ, ಯುವ ಸಾಧಕರಿಗೆ ಪುರಸ್ಕಾರ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ. ಲಯನ್ಸ್ ಪ್ರಾಂತ್ಯ 5 ರ ಸುಮಾರು 300 ಲಯನ್ಸ್ ಸದಸ್ಯರು ಭಾಗವಹಿಸುವ ನಿರೀಕ್ಷೆಯಿದೆ. ಸೇವಾ ಚಟುವಟಿಕೆಗಳಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಮುಂಚೂಣೆಯಲ್ಲಿರುವ ಲಯನ್ಸ್ ಕ್ಲಬ್ ಪಂಜ ನಿರಂತರವಾಗಿ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡಿರುತ್ತದೆ. ಫೀಸ್ ಪೋಸ್ಟರ್ ಜಾಗತಿಕ ಮಟ್ಟದ ವಿಶ್ವಶಾಂತಿ ಚಿತ್ರಕಲಾ ಸ್ಪರ್ಧೆಯಲ್ಲಿ ಪಂಜ ಲಯನ್ಸ್ ಕ್ಲಬ್ ನ್ನು ಪ್ರತಿನಿಧಿಸಿದ ಮಾ. ಕುಶಿತ್ ಮಲ್ಲಾರ ಲಯನ್ಸ್ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ಮಲ್ಟಿಪಲ್ ವಿಭಾಗದಲ್ಲಿಯೂ ಪ್ರಥಮ ಸ್ಥಾನ ಪಡೆದು ಜಾಗತಿಕ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅವರನ್ನು ಈ ಸಂಧರ್ಭದಲ್ಲಿ ರಾಜ್ಯಪಾಲರು ಪುರಸ್ಕರಿಸಲಿದ್ದಾರೆ.