ಪೂದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಭುವನೇಶ್ವರ ಪೂದೆ ಆಯ್ಕೆ

0

ಮುರುಳ್ಯ ಗ್ರಾಮದ ಪೂದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಭುವನೇಶ್ವರ ಪೂದೆ ಆಯ್ಕೆಯಾಗಿದ್ದಾರೆ.

ಮುರುಳ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೂವಪ್ಪ ಗೌಡ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಮಹೇಶ್ ಕುಮಾರ್ ಕರಿಕ್ಕಳರವರ ಉಪಸ್ಥಿತಿಯಲ್ಲಿ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಪುಟ್ಟಣ್ಣ ಆಚಾರ್ಯ ಪೂದೆ, ಹರೀಶ್ ಕುಮಾರ್ ಹುದೇರಿ, ಪವಿತ್ರಪಾಣಿ, ಮಧುಸೂದನ್ ರಾವ್ ಪೂದೆ ರವರ ಉಪಸ್ಥಿತಿಯಲ್ಲಿ ಮಹೇಶ್ ಕುಮಾರ್ ಕರಿಕಳರವರನ್ನು ಸನ್ಮಾನ ಮಾಡಲಾಯಿತು. ಕ್ಷೇತ್ರದ ಭಕ್ತಾದಿಗಳು ಉಪಸ್ಥಿತರಿದ್ದರು.