ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಕಾವೂರು ಮಹಾವಿಷ್ಣು ದೇವಸ್ಥಾನ ವಗೈರೆ ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಗಿ ನಿವೃತ್ತ ಪೊಲೀಸ್ ಅಧಿಕಾರಿ ಜಗನ್ನಾಥ ಕಾಯರ ಆಯ್ಕೆಯಾದರು.

ಇಂದು ಕಾವೂರು ದೇವಸ್ಥಾನದ ವಠಾರದಲ್ಲಿ ಆಡಳಿತಧಿಕಾರಿ ಅಜ್ಜಯ್ಯ ರವರ ಅಧ್ಯಕ್ಷತೆಯಲ್ಲಿ ನಡೆದ ನೂತನ ವ್ಯವಸ್ಥಾಪನಾ ಸಮಿತಿ ಸದಸ್ಯರ ಮೊದಲ ಸಭೆಯಲ್ಲಿ ಈ ಆಯ್ಕೆ ನಡೆಯಿತು.















ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ, ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ರಾಜಾರಾಮ್ ಭಟ್ ಬೆಟ್ಟ, ಅರ್ಚಕ ರಾಮಕೃಷ್ಣ ಮಯ್ಯ, ಧನಂಜಯ ಬಲ್ಕಡಿ, ದಿಲ್ಲಿ ಕುಮಾರ್ ಕಾಯರ, ಭಾಸ್ಕರ ಗೌಡ ಕಾಯರ, ಪುಷ್ಪರಾಜ್ ರೈ ಪಾರೆಪ್ಪಾಡಿ, ಕೊರಗಪ್ಪ ಸೇವಾಜೆ, ನೂತನ ಸದಸ್ಯರಾದ ಮೋಹಿತ್ ಹರ್ಲಡ್ಕ, ಅಣ್ಣು ಕಟ್ಟಕ್ಕೋಡಿ, ರಮ್ಯ ಗುರುರಾಜ್, ಶಾಂತಲಾ ಹರೀಶ್ ನಾರ್ಕೋಡು, ಲಕ್ಷ್ಮಣ ಬೊಳ್ಳಾಜೆ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜಾರಾಮ್ ಬೆಟ್ಟರವರು ನೂತನ ಅಧ್ಯಕ್ಷ ಜಗನ್ನಾಥ ಕಾಯರ ಮತ್ತು ನಿಕಟಪೂರ್ವಧ್ಯಕ್ಷ ರಾಘವ ಗೌಡ ರವರನ್ನು ಗೌರವಿಸಿದರು.
ಜಗನ್ನಾಥ ಕಾಯರ ರವರು ಕಾನ್ ಸ್ಟೇಬಲ್ ಆಗಿ, ಹೆಡ್ ಕಾನ್ ಸ್ಟೇಬಲ್ ಆಗಿ, ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ನಿವೃತ್ತರಾದವರು. ಅಲ್ಲದೆ ಶ್ರೀ ಧರ್ಮಸ್ಥಳ ಜನ ಜಾಗೃತಿ ಸಮಿತಿ ಸುಳ್ಯ ತಾಲೂಕು ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.










