ಪೋಲೀಸ್ ಇಲಾಖೆಗೆ ಸೂಚಿಸಿ – ತಕ್ಷಣ ಕ್ರಮ ಆಗಲಿ : ಇ.ಒ.ಗೆ ಎಂ.ಎಲ್.ಎ. ಸೂಚನೆ
ಸುಳ್ಯದಲ್ಲಿ ಒಂದಂಕಿ ಲಾಟರಿ ಎಗ್ಗಿಲ್ಲದೇ ನಡೆಯಿತ್ತಿದೆ. ಸುಳ್ಯದ ಹೋಟೆಲ್ ಒಂದರ ಪಕ್ಕದಲ್ಲಿ ಇದು ನಡೆಯುತ್ತಿದ್ದು ಇದು ತುಂಬಾ ಅಪಾಯಕಾರಿ ಇದನ್ನು ಸುಳ್ಯದಲ್ಲಿ ತಕ್ಷಣ ನಿಲ್ಲಿಸಿ ” ಎಂದು ಕೆಡಿಪಿ ಸದಸ್ಯ ಜಯಪ್ರಕಾಶ್ ನೆಕ್ರೆಪ್ಪಾಡಿ ಆಗ್ರಹಿಸಿದ್ದಾರೆ.
ಶಾಸಕಿ ಭಾಗೀರಥಿ ಮುರುಳ್ಯರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಆಗ್ರಹಿಸಿದರು.















ಆದರೆ ಸದಸ್ಯರ ಪ್ರಶ್ನೆಗೆ ಉತ್ತರಿಸಲು ಪೋಲೀಸ್ ಅಧಿಕಾರಿಗಳು ಸಭೆಯಲ್ಲಿ ಇರಲಿಲ್ಲ. ಪೋಲೀಸರು ಸಭೆಗೆ ಬರಬೇಕು ಎಂದು ಹೇಳಿದ ಸದಸ್ಯ ಜಯಪ್ರಕಾಶ್ ರವರು, “ಒಂದಂಕಿ ಲಾಟರಿ ಅಪಾಯಕಾರಿ.ಅದರಿಂದ ಮನೆಗಳು ಹಾಳಾಗುತ್ತವೆ. ಬಡ ಕುಟುಂಬ ಕಣ್ಣೀರು ಹಾಕುತ್ತಿವೆ ತಕ್ಷಣ ನಿಲ್ಲಿಸಿ ಎಂದರು.
ಅದಕ್ಕುತ್ತರಿಸಿದ ಶಾಸಕಿ ಭಾಗೀರಥಿ ಮುರುಳ್ಯರವರು “ಒಂದಂಕಿ ಲಾಟರಿ ಅಪಾಯಕಾರಿ. ತಕ್ಷಣ ನಿಲ್ಲಿಸಿ. ಈ ಕುರಿತು ಸಭೆಯ ಸೂಚನೆ ಎಂದು ಪೋಲೀಸ್ ಇಲಾಖೆಗೆ ಪತ್ರ ಬರೆಯಿರಿ. ಕ್ರಮ ಆಗಬೇಕು” ಎಂದು ತಾ.ಪಂ. ಇ.ಒ. ರಾಜಣ್ಣರಿಗೆ ಸೂಚನೆ ನೀಡಿದರು.










