ಅರಂತೋಡು ಶಾಲೆಯಲ್ಲಿ ವಿಜ್ಞಾನ ದಿನಾಚರಣೆ ಹಾಗೂ ಕಣ್ಣಿನ ಉಚಿತ ತಪಾಸಣಾ ಶಿಬಿರ

0


ದ.ಕ.ಜಿಲ್ಲಾ ಪಂಚಾಯತ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಅರಂತೋಡು ಇಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಕಣ್ಣಿನ ಉಚಿತ ತಪಾಸಣಾ ಶಿಬಿರವು ಫೆಬ್ರವರಿ 28 ರಂದು ನಡೆಯಿತು.

ವಿಜ್ಞಾನ ದಿನಾಚರಣೆ ಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೇಶವ ಅಡ್ತಲೆ ಇವರು ನೆರವೇರಿಸಿ ಶುಭ ಹಾರೈಸಿದರು.ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಸುರೇಶ್ ಉಳುವಾರು ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುಬ್ರಹ್ಮಣ್ಯ ಕೆ ಎನ್ ಶುಭ ಹಾರೈಸಿದರು.ನ್ಯೂವಿಷನ್ ಜನರೇಷನ್ ಪ್ರೋಗ್ರಾಮ್ ನ ಪ್ರೋಗ್ರಾಮರ್ ಹೇಮಚಂದ್ರ ಕಣ್ಣಿನ ಉಚಿತ ತಪಾಸಣಾ ಶಿಬಿರದ ಬಗ್ಗೆ ಮಾತನಾಡಿದರು.ನಂತರ ವಿದ್ಯಾರ್ಥಿಗಳು ವಿಜ್ಞಾನದ ವಿವಿಧ ಮಾದರಿಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಗೋಪಾಲಕೃಷ್ಣ ಬನ, ಸಹಶಿಕ್ಷಕಿ ಯವರಾದ ಶ್ರೀಮತಿ ಭಾನುಮತಿ, ಶ್ರೀಮತಿ ಗೀತಾ ಕುಮಾರಿ, ಶ್ರೀಮತಿ ರೇಶ್ಮಾ, ಶ್ರೀಮತಿ ರೇಣುಕಾ, ಶ್ರೀಮತಿ ಶಕುಂತಳಾ, ಶ್ರೀಮತಿ ಅನಿತ,ಕು.ಪೂರ್ಣಿಮ,ಕು.ಅಜ್ಮೀನ ಉಪಸ್ಥಿತರಿದ್ದು ಸಹಕರಿಸಿದರು.ವಿದ್ಯಾರ್ಥಿಗಳಾದ ಚರಿತ ಯು ಎಸ್,ಫಾತಿಮತ್ ಝಾಹಿರ ಕಾರ್ಯಕ್ರಮ ನಿರೂಪಿಸಿದರು.ದೀಕ್ಷಾ ಎನ್ ವೈ ವಿಜ್ಞಾನ ದಿನಾಚರಣೆ ಬಗ್ಗೆ ಮಾತನಾಡಿದರು.ಡೀಕ್ಷಾ ಸಿ ಎಸ್ ಸ್ವಾಗತಿಸಿ,ಧನ್ವಿ ವೈ ವಂದನಾರ್ಪಣೆ ಸಲ್ಲಿಸಿದರು.