ದೊಡ್ಡತೋಟದಲ್ಲಿ ಜೀರ್ಣೋದ್ದಾರಗೊಳ್ಳುತ್ತಿರುವ ಶ್ರೀರಾಮ ಭಜನಾ ಮಂದಿರಕ್ಕೆ ಕರ್ನಾಟಕ ರಾಜ್ಯ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ, ದೇಶಕೋಡಿ ಶ್ರೀ ಅನ್ನಪೂರ್ಣೇಶ್ವರಿ ಯೋಗಿಶ್ವರ ಸಿದ್ದಮಠದ ಧರ್ಮದರ್ಶಿ ಗಳಾದ ರಾಜೇಶನಾಥ್ ಜೀಯವರು ಫೆ. 23ರಂದು ಭೇಟಿ ನೀಡಿದರು.









ಬಳಿಕ ಜೀರ್ಣೋದ್ದಾರ ಗೊಳ್ಳುತ್ತಿರುವ ಭಜನಾ ಮಂದಿರವನ್ನು ವೀಕ್ಷಿಸಿ, ಮೆಚ್ಚುಗೆ ಸೂಚಿಸಿದರಲ್ಲದೇ, ಒಂದು ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಪ್ರವೀಣ್ ರಾವ್, ರವಿಚಂದ್ರ ಕೊಡಪಾಲ, ಹಿಮಕರ ನೆಲ್ಲಿಕುಂಜ, ಮಾಧವ ನಂದಗೋಕುಲ, ಚಂದ್ರಶೇಖರ ಮೆರ್ಕಜೆ, ಅಶ್ವಥ್ ಮಡಪ್ಪಾಡಿ, ಉದಯಕುಮಾರ್ ಮೈರ್ಪಳ್ಳ, ಹರೀಶ್ ಕೊಡಪಾಲ, ಹರೀಶ್ ಚೆನ್ನಡ್ಕ, ಚಿಂತನ ನಂದಗೋಕುಲ, ಅಶ್ವದಿ ಕೊಡಪಾಲ, ಮರ್ಕಂಜ ಪಂಚಸ್ಥಾಪನೆಗಳ ವ್ಯವಸ್ಥಾಪನಾ ಸಮಿತಿ ಸದಸ್ಯ ಲಕ್ಷ್ಮಣ ಬೊಳ್ಳಾಜೆ ಮತ್ತು ಪ್ರಮೋದ್ ಬೊಳ್ಳಾಜೆ, ವಿಜಯಕುಮಾರ್ ಉಪಸ್ಥಿತರಿದ್ದರು.










