ಐವರ್ನಾಡು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹಮ್ಮದ್ ಇಸಾಕ್ ರವರು ಫೆ.28 ರಂದು ಸೇವಾ ನಿವೃತ್ತಿ ಹೊಂದಿದ್ದು ಅವರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವು ಫೆ.28 ರಂದು ಕಾಲೇಜಿನಲ್ಲಿ ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥರವರು ಮಾತನಾಡಿ ಇಸಾಕ್ ರವರು ಎಲ್ಲರೊಂದಿಗೆ ಉತ್ತಮ ಬಾಂದವ್ಯವನ್ನು ಹೊಂದಿದವರು.
ಸದಾ ಚಟುವಟಿಕೆಯಿಂದ ಇರುವ ಇವರು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಿದ್ದಾರೆ
ಎಂದು ಹೇಳಿ ನಿವೃತ್ತಿ ಜೀವನಕ್ಕೆ ಶುಭಹಾರೈಸಿದರು.

ನಿವೃತ್ತ ಪ್ರಾಂಶುಪಾಲ ಮಹಮ್ಮದ್ ಇಸಾಕ್ ಶ್ರೀಮತಿ ಕೈರುನ್ನೀಸಾ ದಂಪತಿ ಮತ್ತು ಇಸಾಕ್ ರವರ ತಂದೆ ಅಬ್ಬಾಸ್ ಹಾಜಿ ಅಗ್ನಾಡಿ ಯವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಇಸಾಕ್ ರವರು ತಮ್ಮ ಸೇವಾವಧಿಯ ದಿನಗಳನ್ನು ಸ್ಮರಿಸಿಕೊಂಡು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.








ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಪಿಡಿಒ ಶ್ಯಾಮ್ ಪ್ರಸಾದ್,ಬೆಂಗಳೂರಿನ ಉದ್ಯಮಿ ಹರೀಶ್ ರಾವ್ ಉದ್ದಂಪಾಡಿ,ಉಪನ್ಯಾಸಕರಾದ ಶಿವರಾಮ ನಾಯ್ಕ್,ಕಮಲಾಕ್ಷ, ಕಾಲೇಜಿನ ಪ್ರಭಾರ ಪ್ರಾಂಶುಪಾಲ ಗೋಪಾಲಕೃಷ್ಣ,ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸೂಫಿ ಪೆರಾಜೆ,ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ದಯಾನಂದ ಕಟ್ಟತ್ತಾರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿಶನ್ ಜಬಳೆ ಉಪಸ್ಥಿತರಿದ್ದು ಶುಭಹಾರೈಸಿದರು.
ಇಸಾಕ್ ರವರ ಸಹೋದರ ಇಬ್ರಾಹಿಂ ರವರು ಶುಭಹಾರೈಸಿ ಶಾಲೆಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.ಇಲ್ಯಾಸ್ ಕರಾಯ ಶುಭಹಾರೈಸಿ ಮಾತನಾಡಿದರು.
ಉಪನ್ಯಾಸಕಿ ವಿಜಯರವರು ಸನ್ಮಾನ ಪತ್ರ ವಾಚಿಸಿದರು.
ಶಿಕ್ಷಕಿ ಶ್ರೀಮತಿ ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಶಿಕ್ಷಕ ನಾರಾಯಣರವರು ಸ್ವಾಗತಿಸಿ, ಶಿಕ್ಷಕಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.

ರಾಮಚಂದ್ರ ಪಲ್ಲತ್ತಡ್ಕರವರಿಗೆ ಗೌರವಾರ್ಪಣೆ
ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸದಾ ಪ್ರೋತ್ಸಾಹಿಸಿ,ಸಹಕರಿಸುತ್ತಿರುವ ರಾಮಚಂದ್ರ ಪಲ್ಲತ್ತಡ್ಕರವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು.










