ಪಂಜ: ಸುದ್ದಿ ಸುಳ್ಯ ಹಬ್ಬದ ಪೂರ್ವಭಾವಿ ಸಭೆ

0

ಸುಳ್ಯ ತಾಲೂಕಿಗೆ 60 ವರ್ಷ ಹಾಗೂ ಸುದ್ದಿಗೆ 40 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಮ್ಮ ಗ್ರಾಮ ನಮ್ಮ ಹೆಮ್ಮೆ ಅಭಿಯಾನದ ಮೂಲಕ ನಡೆಯಲಿರುವ ಸುದ್ದಿ ಸುಳ್ಯ ಹಬ್ಬದ ಪ್ರಯುಕ್ತ ಗ್ರಾಮ ಮಟ್ಟದ ಸಮಿತಿ ರಚನೆಯ ಬಗ್ಗೆ ಐವತ್ತೊಕ್ಲು ಮತ್ತು ಕೂತ್ಕುಂಜ ಗ್ರಾಮಗಳ ಪೂರ್ವಭಾವಿ ಸಮಾಲೋಚನಾ ಸಭೆಯ ಫೆ. 28ರಂದು ಪಂಜ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.

ಸುದ್ದಿ ವರದಿಗಾರ ಈಶ್ವರ ವಾರಣಾಶಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸಭೆಗೆ ವಿವರಿಸಿದರು.

ಪ್ರಗತಿಪರ ಕೃಷಿಕರಾದ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್ ಮಾತನಾಡಿ ಸುದ್ದಿ ಸುಳ್ಯ ತಾಲೂಕಿನ ಜನರ ಮಾಧ್ಯಮ. ಸುಳ್ಯದ ಜನತೆಯನ್ನು ಒಟ್ಟುಗೂಡಿಸುವ ಮತ್ತು ಸಾಧಕರನ್ನು ಗುರುತಿಸುವಂತದ್ದು ಅತ್ಯುತ್ತಮ ಕಾರ್ಯಕ್ರಮ. ನಾವು ಬೆಂಬಲಿಸುತ್ತೇವೆ ಎಂದರು.

ಸಭೆಯಲ್ಲಿ ತಾಲೂಕು ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಡಿ. ಪ್ರಸಾದ್ ಕಾನತ್ತೂರ್, ಪಂಜ ಜೇಸಿಐ ಅಧ್ಯಕ್ಷ ಹಾಗೂ ಪಂಜ ಸಿ.ಎ. ಬ್ಯಾಂಕ್ ನಿರ್ದೇಶಕ ವಾಚಣ್ಣ ಕೆರೆಮೂಲೆ, ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಗೌಡ ಕುದ್ವ, ಪಂಜ ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಸುಮಾ ಕುದ್ವ, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ಮಾಲಿನಿ ಕುದ್ವ, ಕೆ.ಎಸ್. ಗೌಡ ವಿದ್ಯಾ ಸಂಸ್ಥೆಯ ನಿರ್ದೇಶಕ ಕುಮಾರಸ್ವಾಮಿ ಕೆ.ಎಸ್, ಕೂತ್ಕುಂಜ ಮಹಿಳಾ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಚಂದ್ರಾ ಹೊನ್ನಪ್ಪ ಚಿದ್ಗಲ್, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಕಚೇರಿ ಸಿಬ್ಬಂದಿ ಸುಜಿತ್ ಪಂಬೆತ್ತಾಡಿ, ಸುದ್ದಿ ಪ್ರತಿನಿಧಿ ಮಧು ಪಂಜ, ಸುದ್ದಿ ಚಾನೆಲ್ ಕ್ಯಾಮರಾಮೆನ್ ಕೌಶಿಕ್ ರಾಮ್ ಬಳ್ಳಕ್ಕ, ಕು. ಮೋಕ್ಷಾ, ಕು. ಕಾರುಣ್ಯ ಈ ಸಂದರ್ಭದಲ್ಲಿ
ಉಪಸ್ಥಿತರಿದ್ದರು.

ಸಮಿತಿ ರಚನೆ:

ನಮ್ಮ ಗ್ರಾಮ ನಮ್ಮ ಹೆಮ್ಮೆ – ಸುಳ್ಯ ಹಬ್ಬ ಗ್ರಾಮ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ಸಭೆಯಲ್ಲಿ ಸಮಿತಿಯನ್ನು ಮತ್ತಷ್ಟು ವೇಳೆ ವಿಸ್ತರಿಸುವುದೆಂದು ನಿರ್ಧರಿಸಲಾಯಿತು.

ಐವತ್ತೊಕ್ಲು ಗ್ರಾಮದ ಸಮಿತಿ ಅಧ್ಯಕ್ಷರಾಗಿ ಡಾ. ದೇವಿಪ್ರಸಾದ್ ಕಾನತ್ತೂರ್, ಸಂಚಾಲಕರಾಗಿ ವಾಚಣ್ಣ‌ ಕೆರೆಮೂಲೆ ಮತ್ತು ಕೂತ್ಕುಂಜ ಗ್ರಾಮ ಸಮಿತಿ ಗೌರವಾಧ್ಯಕ್ಷರಾಗಿ ಶ್ರೇಯಾಂಸ್ ಕುಮಾರ್ ಶೆಟ್ಟಿಮೂಲೆ, ಅಧ್ಯಕ್ಷರಾಗಿ ಕೇಶವ ಗೌಡ ಕುದ್ವ, ಸಂಚಾಲಕರಾಗಿ ಕುಮಾರಸ್ವಾಮಿ ಕೆ.ಎಸ್ ರನ್ನು ಆಯ್ಕೆಮಾಡಲಾಯಿತು.