ಅರಂತೋಡು ಗ್ರಾಮದ ಅಡ್ತಲೆ ಉಳ್ಳಾಕುಲು ಹಾಗೂ ಮಲೆದೈವಗಳ ದೈವಸ್ಥಾನ ಅಡ್ತಲೆ -ಬೆದ್ರುಪಣೆ ಇದರ ಆಡಳಿತ ಸಮಿತಿ ವಾರ್ಷಿಕ ಮಹಾ ಸಭೆಯು ಅಧ್ಯಕ್ಷರಾದ ಗಣೇಶ್ ಮಾಸ್ತರ್ ಅಡ್ತಲೆ ಯವರ ಅಧ್ಯಕ್ಷತೆಯಲ್ಲಿ ಅಡ್ತಲೆ ಉಳ್ಳಾಕುಲು ದೈವಸ್ಥಾನ ವಠಾರದಲ್ಲಿ ಮಾ.1 ರಂದು ನಡೆಯಿತು.

ಸಭೆಯಲ್ಲಿ ಈ ವರ್ಷ ದ ಉಳ್ಳಾಕುಲು ಮತ್ತು ಮಲೆ ದೈವಗಳ ನಾಡವಳಿಯನ್ನು ಮಾಮೂಲಿನಂತೆ ಇದೆ ಮಾರ್ಚ್ ತಿಂಗಳ 21ರಂದು ಕೂಡಿ ಮಾರ್ಚ್ ತಿಂಗಳ 22ನೇ ಶನಿವಾರದಂದು ಅಡ್ತಲೆ ಮೂಲ ದೈವಸ್ಥಾನದಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿ ಕಾರ್ಯದರ್ಶಿ ಪ್ರಸನ್ನ ಪಿಂಡಿಮನೆ ವಾರ್ಷಿಕ ವರದಿ ವಾಚಿಸಿದರು.
ಈ ಸಂದರ್ಭದಲ್ಲಿ ವಾರ್ಷಿಕ ಸಭೆಯಲ್ಲಿ ವೇದಿಕೆಯಲ್ಲಿ ಹಿರಿಯರಾದ ಹೊನ್ನಪ್ಪ ಮಾಸ್ತರ್ ಉಪಸ್ಥಿತರಿದ್ದರು. ಸಭೆಯಲ್ಲಿ ಅಡ್ತಲೆ ಬಂಡಾರಮನೆಯವರು ಮತ್ತು ಅಡ್ತಲೆ -ಬೆದ್ರುಪಣೆ ಹತ್ತು ಕುಟುಂಬದ ಹತ್ತು ಸಮಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ಸಮಿತಿ ಅಧ್ಯಕ್ಷರಾದ ಗಣೇಶ್ ಮಾಸ್ತರ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.