ಸಂಚಾರ ದುಸ್ತರವಾದ ಪಿ.ಡಬ್ಲ್ಯೂ.ಡಿ. ರಸ್ತೆಗಳಿಗೆ ಅನುದಾನಕ್ಕೆ ಮನವಿ
















ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿಯವರನ್ನು ಮಾ. ೧೧ರಂದು ಶಾಸಕಿ ಭಾಗೀರಥಿ ಮುರುಳ್ಯರವರು ಅವರ ನಿವಾಸದಲ್ಲಿ ಭೇಟಿಯಾಗಿ , ಇತ್ತೀಚೆಗೆ ಸಚಿವರೇ ಖುದ್ದಾಗಿ ವೀಕ್ಷಿಸಿದ ಅರಂತೋಡು -ಎಲಿಮಲೆ ರಸ್ತೆಯ ಸಹಿತ ಸುಳ್ಯ ವಿಧಾನಸಭಾ ಕ್ಷೇತ್ರದ ತೀವ್ರವಾಗಿ ಹದಗೆಟ್ಟು ವಾಹನ ಸಂಚಾರಕ್ಕೆ ತೊಂದರೆ ಅನುಭವಿಸುತ್ತಿರುವ ಪಿ. ಡಬ್ಲ್ಯೂ.ಡಿ. ರಸ್ತೆಗಳಿಗೆ ಶೀಘ್ರದಲ್ಲಿ ಅನುದಾನ ಒದಗಿಸಿಕೊಡುವಂತೆ ಮನವಿ ಸಲ್ಲಿಸಿದರು.

ಶಾಸಕರ ಮನವಿ ಸ್ಪಂದಿಸಿರುವ ಸಚಿವರು ಅನುದಾನ ನೀಡುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಅರಂತೋಡು ಜಿಲ್ಲಾ ಪಂಚಾಯತ್ ನಿಕಟಪೂರ್ವ ಸದಸ್ಯರಾದ ಹರೀಶ್ ಕಂಜಿಪಿಲಿ, ಆರಂತೋಡು ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ ಕುತ್ತಮೊಟ್ಟೆ, ಅರಂತೋಡು ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಾಸುದೇವ ನಾಯಕ್ ಉಪಸ್ಥಿತರಿದ್ದರು.










