ಆಲೆಟ್ಟಿ(ನಾರ್ಕೋಡು) ಪ್ರಾಥಮಿಕ ಶಾಲೆಯಲ್ಲಿ ನಡೆದ ಎನ್.ಎಸ್.ಎಸ್ ಶಿಬಿರದ ಸಮಾರೋಪ

0

ಸುಳ್ಯಸರಕಾರಿ ಪ್ರಥಮ ದರ್ಜೆ ಕಾಲೇಜಿನ
ಎನ್. ಎಸ್. ಎಸ್. ಶಿಬಿರದ ವಿದ್ಯಾರ್ಥಿಗಳಿಂದ
ಆಲೆಟ್ಟಿ( ನಾರ್ಕೋಡು) ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಮಾ.8 ರಿಂದ 10 ರ ತನಕಹಮ್ಮಿಕೊಂಡ ಎನ್.ಎಸ್.ಎಸ್.ಶಿಬಿರದ ಸಮಾರೋಪ ಸಮಾರಂಭವು ಮಾ.10 ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ. ಆರ್ ವಹಿಸಿದ್ದರು. ಆಲೆಟ್ಟಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕಮಲ ಕುಮಾರ್ ನಾಗಪಟ್ಟಣ, ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಪಿ.ಎಂ ಪೋಷಣ್ ಇದರ ಸಹಾಯಕ ನಿರ್ದೇಶಕಿ ಶ್ರೀಮತಿ ವೀಣಾ ಎಂ ಟಿ, ನಿಕಟಪೂರ್ವ ಎಸ್.ಡಿ.ಎಂ.ಸಿ ಅಧ್ಯಕ್ಷ ಯತಿರಾಜ್ ಭೂತಕಲ್ಲು, ಯೂಟ್ಯೂಬರ್ ವಿಖ್ಯಾತ್ ಬಾರ್ಪಣೆ , ಪ್ರಗತಿಪರ ಕೃಷಿಕರಾದ ಕೃಪಾಶಂಕರ್ ತುದಿಯಡ್ಕ, ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಉದಯಶಂಕರ ಹೆಚ್, ಕಾಲೇಜಿನ ಐಕ್ಯೂಎ.ಸಿ ಸಂಚಾಲಕಿ ಡಾ. ಪ್ರೀತಿ ಕೆ. ರಾವ್, ಶಾಲಾ ಮುಖ್ಯ ಶಿಕ್ಷಕಿ ಸುನಂದ ಜಿ, ಎನ್.ಎಸ್.ಎಸ್ ಅಧಿಕಾರಿ ರಾಮಕೃಷ್ಣ ಕೆ ಹಾಗೂ ಡಾ. ಮೊನೀಷಾ, ಎನ್.ಎಸ್.ಎಸ್ ನಾಯಕರುಗಳಾದ ಪವನ್ ಬಿ.ಕೆ, ಅಮೂಲ್ಯ ಎ.ಕೆ, ಹಿತೇಶ್ ಕೆ ಡಿ, ಮೈತ್ರಿ ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು
ಶಿಬಿರದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಘಟಕಾಧಿಕಾರಿ
ಡಾ. ಮೊನೀಷಾ ಸ್ವಾಗತಿಸಿದರು. ರಾಮಕೃಷ್ಣ ಕೆ. ಎಸ್ ವಂದಿಸಿದರು.
ಕು. ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.