ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರೀ ಭದ್ರಕಾಳಿ ದೇವಸ್ಥಾನದ ಸಂಪರ್ಕ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ

0

ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರೀ ಭದ್ರಕಾಳಿ ದೇವಸ್ಥಾನದ ಸಂಪರ್ಕ ರಸ್ತೆ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ರೂ 6.50ಲಕ್ಷ ಅನುದಾನ ಮಂಜೂರುಗೊಂಡಿದ್ದು, ಕಾಮಗಾರಿಗೆ ಶಿಲಾನ್ಯಾಸವನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ಗುದ್ದಲಿ ನೆರವೇರಿಸಿ ಶುಭಹಾರೈಸಿದರು.

ಕ್ಷೇತ್ರದ ಅರ್ಚಕ ಬಾಲಕೃಷ್ಣ ಪುರೋಹಿತ್ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ವನಿತಾ ಸುವರ್ಣ, ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಅಲೆಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ನಡುಬೈಲು, ಗ್ರಾ.ಪಂ. ಸದಸ್ಯರಾದ ಕರುಣಾಕರ ಗೌಡ ಹುದೇರಿ, ಶೀಲಾವತಿ ಗೊಳ್ತಿಲ, ದೇವಸ್ಥಾನದ ಅನುವಂಶೀಯ ಮೊಕ್ತೇಸರ ಚಿನ್ನಯ್ಯ ಆಚಾರ್ಯ ಕುಕ್ಕಟ್ಟೆ, ಆಡಳಿತ ಸಮಿತಿ ಉಪಾಧ್ಯಕ್ಷೆ ಸರೋಜಿನಿ ಆಚಾರ್ಯ ಕಡಬ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸಂಜಯ್ ಆಚಾರ್ಯ, ಪುರುಷೋತ್ತಮ ಆಚಾರ್ಯ ಕುಕ್ಕಟ್ಟೆ, ವೆಂಕಪ್ಪ ಗೌಡ ಅಲಾಜೆ, ರೂಪರಾಜ್ ರೈ, ಕೇಶವ ಗೊಳ್ತಿಲ, ಶೇಖರ ಸಾಲ್ಯಾನ್, ಪದ್ಮನಾಭ ಗೌಡ ಪೂದೆ, ಮೋನಪ್ಪ ಗೌಡ ಅಲೇಕಿ, ಅಶೋಕ್ ರೈ ಪಿಜಾವು, ಅನೂಪ್, ಜಗದೀಶ್ ಆಚಾರ್ಯ, ರಾಜಶೇಖರ್ ಪೂರೂಹಿತ್ ನೂಜಾಡಿ, ರೋಹಿತ್ ಕೊಡ್ಡೋಳು, ರುಕ್ಮಯ್ಯ ಗೌಡ ಅಲೆಕ್ಕಾಡಿ ಮತ್ತಿತರರು ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜನಾರ್ದನ ಆಚಾರ್ಯ ಕಾಣಿಯೂರು ಸ್ವಾಗತಿಸಿ, ವಂದಿಸಿದರು