ಕೊಡಗು ಸಂಪಾಜೆ : ರಸ್ತೆಗೆ ಅಡ್ಡಲಾಗಿ ಬಿದ್ದ ಮರ – ವಿದ್ಯುತ್ ಕಂಬಗಳಿಗೆ ಹಾನಿ

0

ಕೊಡಗು ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಮರವೊಂದು ಅಡ್ಡಲಾಗಿ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ ಮತ್ತು ವಿದ್ಯುತ್ ಕಂಬಗಳಿಗೆ ಹಾನಿಯಾದ ಘಟನೆ ಮಾ.14 ರಂದು ಮಧ್ಯಾಹ್ನ ಸಂಭವಿಸಿದೆ.

ಸ್ಥಳಕ್ಕೆ ಸ್ಥಳೀಯರಾದ ರಿತಿನ್ ಡೆಮ್ಮಲೆ , ಸಂಪತ್ ಅಚ್ರಪ್ಪಾಡಿ , ಲಕ್ಷ್ಮಣ , ಕೇಶವ ಚೌಟಾಜೆ, ಕೃಷ್ಣ ಅರಮನೆ ತೋಟ, ಪಂಜಿಕಲ್ಲು ಪ್ರಶಾಂತ್ ಹಾಗೂ ಚೆಸ್ಕಾಂನ ಅನಿಲ್, ವೇಣು ಸೇರಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ  ಸಹಕರಿಸಿದರು