ಬಾಳಿಲ ಗ್ರಾಮದ ಕೊಡೆಂಕಿರಿ ವಿಜಿತ್ ರೈಯವರ ಮನೆಯಂಗಳದಲ್ಲಿ ಇಂದು ಸಂಜೆ ಹೆಬ್ಬಾವೊಂದು ಕಾಣಿಸಿಕೊಂಡಿದ್ದು, ಸ್ಥಳೀಯರಾದ ವಿಜಿತ್ ಬಾಳಿಲ ಮತ್ತು ಸುಜಿತ್ ಬಾಳಿಲ ಹಾವನ್ನು ಹಿಡಿದು ಬಂಟಮಲೆ ತಪ್ಪಲಿಗೆ ಬಿಟ್ಟು ಬಂದಿರುವುದಾಗಿ ವರದಿಯಾಗಿದೆ.
ಈ ಭಾಗದಲ್ಲಿ ಈ ಹಿಂದೆ ಸುಮಾರು 8-9 ಹಾವುಗಳನ್ನು ಹಿಡಿದಿರುವುದಾಗಿ ವಿಜಿತ್ ಬಾಳಿಲ ತಿಳಿಸಿದರು. ಈ ಹಾವು ಸುಮಾರು 12 ಅಡಿಯಷ್ಟು ಉದ್ದ ಇದ್ದಿರಬಹುದೆನ್ನಲಾಗಿದೆ.